ಬಂಟ್ವಾಳನ್ಯೂಸ್ ವರದಿ:
ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕ ನಿರ್ವಹಿಸುವ ಬಂಟ್ವಾಳ ತಾಲೂಕು 16ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಓಜಾಲ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ಡಿ. 13ರಂದು ನಡೆಸಲಾಗುವುದು. ಸಮ್ಮೇಳನದಲ್ಲಿ ತಾಲೂಕಿನ 18 ವಯೋಮಾನದ ಒಳಗಿನ ಮಕ್ಕಳು ಭಾಗವಹಿಸ ಬಹುದೆಂದು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ ಬಾಯಾರು ತಿಳಿಸಿರುವರು.
18 ವರ್ಷ ವಯೋಮಾನದ ವಿದ್ಯಾರ್ಥಿಗಳಿರುವ ತಾಲೂಕಿನೊಳಗಿರುವ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾ ಸಂಸ್ಥೆಗಳಲ್ಲಿ ಐದು ವರ್ಷಗಳಿಂದೀಚೆಗೆ ಸಾಹಿತ್ಯ ಹಾಗೂ ಇತರ ಕಲೆಗಳಲ್ಲಿ ಮಾಡಿದ ಸಾಧನೆಗಳ ಆಧಾರದಲ್ಲಿ ಸಾಹಿತ್ಯ ತಾರೆ ಪುರಸ್ಕಾರಕ್ಕೆ ವಿಟ್ಲ ಬಸವನಗುಡಿಯಲ್ಲಿರುವ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಹಲವು ಸಂಸ್ಥೆಗಳಲ್ಲಿ ಸಾಹಿತ್ಯ ಹಾಗೂ ವಿವಿಧ ಕಲೆಗಳಲ್ಲಿ ಮಕ್ಕಳಿಗೆ ಸಹಕರಿಸಿದ ಸಾಧಕರಲ್ಲಿ ರಂಗಕರ್ಮಿ ಪತ್ರಕರ್ತ ಮೌನೇಶ ವಿಶ್ವಕರ್ಮ ಅವರನ್ನು ಬಾಲಬಂಧು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಸಮ್ಮೇಳನದಂದು ಸಾಹಿತ್ಯ ತಾರೆ ಮತ್ತು ಬಾಲಬಂಧು ಪುರಸ್ಕಾರಗಳನ್ನು ಪ್ರದಾನ ಮಾಡಲಾಗುವುದು. ಸಮ್ಮೇಳನದಲ್ಲಿ 18 ವಯೋಮಾನದೊಳಗಿನ ಮಕ್ಕಳಿಗೆ ಚಿತ್ತ ಚಿತ್ತಾರ, ಮಾತು ಕತೆ, ಸಾಹಿತ್ಯ ರಚನೆ, ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ರಮೇಶ ಎಂ ಬಾಯಾರು ತಿಳಿಸಿರುವರು.
Be the first to comment on "ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಬಾಲಬಂಧು ಪ್ರಶಸ್ತಿಗೆ ಮೌನೇಶ ವಿಶ್ವಕರ್ಮ ಆಯ್ಕೆ"