ಸಮಾಜ ಸೇವಕ ಕೊಡುಗೈ ದಾನಿ, ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಬಡಜನರ ಪಾಲಿನ ಎರ್ಮಾಳ ಡಾಕ್ಟರ್ ಎಂದೇ ಹೆಸರುವಾಸಿಯಾದ ಡಾ. ಭಾಸ್ಕರ್ ರಾವ್, ಹಿರಿಯ ಪತ್ರಕರ್ತ ವೆಂಕಟೇಶ ಬಂಟ್ವಾಳ, ಯಕ್ಷಗಾನ ಕ್ಷೇತ್ರದ ಖ್ಯಾತ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ, ದೈವ ನರ್ತಕ ವೆಂಕಪ್ಪ ನಲಿಕೆ , ಸಜೀಪ ಶಾರದ ಫ್ರೆಂಡ್ಸ್ ಸರ್ಕಲ್ ವಿದ್ಯಾನಗರ ಸಜೀಪ ಮುನ್ನೂರು ಇವರ ಸೇವೆ ಚಟುವಟಿಕೆಗಳನ್ನು ಗುರುತಿಸಿ ಒಟ್ಟು ಬಂಟ್ವಾಳ ಐವರಿಗೆ ಹಾಗೂ ಒಂದು ಒಂದು ಸಂಘಸಂಸ್ಥೆಗೆ ಈ ಬಾರಿಯ ಪ್ರತಿಷ್ಠಿತ ದ.ಕ.ಜಿಲ್ಲೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ



ಕಳೆದ 28 ವರ್ಷಗಳಿಂದ ಪತ್ರಕರ್ತರಾಗಿ ದುಡಿಯುತ್ತಿರುವ ಬಂಟ್ವಾಳ ಕಸ್ಬಾ ಗ್ರಾಮದ ವಿ.ಪಿ.ರಸ್ತೆ ನಿವಾಸಿ ದಿವಂಗತ ವಿಶ್ವನಾಥ ನಾಯ್ಕ್ ,ವಿಜಯ ದಂಪತಿಯ ನಾಲ್ಕು ಮಕ್ಕಳಲ್ಲಿ ಏಕೈಕ ಪುತ್ರನಾಗಿರುವ ವೆಂಕಟೇಶ್ ಬಂಟ್ವಾಳ ಅವರು 1967 ಆಗಸ್ಟ್ 02 ರಂದು ಜನಿಸಿದ್ದರು.ತಮ್ಮ ಶಿಕ್ಷಣವನ್ನು ಬಂಟ್ವಾಳ ಎಸ್ .ವಿ .ಎಸ್ ವಿದ್ಯಾ ಸಂಸ್ಥೆಯಲ್ಲಿ ಪೂರೈಸಿದ್ದಾರೆ. ವೆಂಕಟೇಶ್ ಅವರು ಮಂಗಳೂರಿನಲ್ಲಿ ವಿವಿಧ ಸಂಜೆ ಪತ್ರಿಕೆ ಸಹಿತ ಪುತ್ತೂರಿನಲ್ಲಿ ಬೆಳಗ್ಗಿನ ಪತ್ರಿಕೊಂದರಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದ್ದರು. ಸುಮಾರು 23 ವರ್ಷಗಳಿಂದ ಹೊಸದಿಗಂತ ಪತ್ರಿಕೆಯಲ್ಲಿ ಬಂಟ್ವಾಳ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಹಲವು ಸಾಮಾಜಿಕ, ಮಾನವೀಯ ವರದಿಗಳು ಮೆಚ್ಚುಗೆಗೆ ಪಾತ್ರವಾಗಿವೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಉಪಾಧ್ಯಕ್ಷ, ಕಾರ್ಯದರ್ಶಿಯಾಗಿ ಸುದೀರ್ಘ ಅವಧಿಯ ಕಾಲ ಸೇವೆ ಸಲ್ಲಿಸಿದ್ದು,ಪ್ರಸ್ತುತ ಸಂಘದ ಸದಸ್ಯರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಇವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಹದಗೆಟ್ಟಿದ್ದ ರಸ್ತೆ ದುರಸ್ಥಿಗಾಗಿ ನಡೆದ ವಿನೂತನ ಪ್ರತಿಭಟನೆ ಗಮನ ಸೆಳೆದಿತ್ತು. ಮಂಗಳೂರು ಗಾಳದ ಕೊಂಕಣಿ ಅಭ್ಯುದಯ ಸಂಘದ ಕಾರ್ಯದರ್ಶಿಯಾಗಿರುವುದಲ್ಲದೆ,ತೊಕ್ಕೊಟ್ಟು ಶ್ರೀ ಸೋಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತದ ನಿರ್ದೇಶಕರು,ಮುನ್ನೂರು ಗ್ರಾಮದ ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಸದಸ್ಯರಾಗಿರುತ್ತಾರೆ. ರಾಜ್ಯಮಟ್ಟದ “ಸ್ವಸ್ತಿಕ್ ಸಂಭ್ರಮ್” ಪುರಸ್ಕಾರ, 2021ರ ಫೆಭ್ರವರಿ ತಿಂಗಳಲ್ಲಿ ನಡೆದ ಬಂಟ್ವಾಳ ತಾಲೂಕು 21 ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೆಯೇ ವಿವಿಧ ಸಂಘ ಸಂಸ್ಥೆಗಳಿಂದ ಕಾರ್ಯ ಸಾಧನೆಗಾಗಿ ಸನ್ಮಾನಿಸಲ್ಪಟ್ಟಿರುತ್ತಾರೆ. ಬಂಟ್ವಾಳತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿ ಪ್ರಸ್ತುತ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿ ಸೇರಿದಂತೆ ಹಲವು ಸಂಘ,ಸಂಸ್ಥೆಗಳ ಮೂಲಕ ಸಾಮಾಜಿಕ ಚಟುವಟಿಕೆಯಲ್ಲು ತೊಡಗಿಸಿಕೊಂಡಿದ್ದಾರೆ.
ಪತ್ನಿ ಅನುರಾಧ,ಮಕ್ಕಳಾದ ಗಗನ್,ಯಶಸ್ವಿನಿಯೊಂದಿಗೆ ಬಂಟ್ವಾಳದಲ್ಲಿ ಗೃಹಸ್ಥ ಜೀವನ ನಡೆಸುತ್ತಿದ್ದಾರೆ.
Be the first to comment on "ಸಮಾಜಸೇವಕ ಕೆ.ಸೇಸಪ್ಪ ಕೋಟ್ಯಾನ್, ಹಿರಿಯ ಪತ್ರಕರ್ತ ವೆಂಕಟೇಶ ಬಂಟ್ವಾಳ್ ಸೇರಿದಂತೆ ಬಂಟ್ವಾಳದ ಐವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ"