



ಬಂಟ್ವಾಳ: ಸಾರ್ವಜನಿಕರು ಮತ್ತು ಭಂಡಾರಿಬೆಟ್ಟು ಸ್ಥಳೀಯ ಯುವಕರ ತಂಡದಿಂದ ನಿರ್ಮಾಣಗೊಂಡ ನೂತನ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆಗೊಂಡಿತು. ಹೆದ್ದಾರಿಯ ಬದಿಯಲ್ಲಿ ಬಂಟ್ವಾಳ ಬೈಪಾಸ್ ರಸ್ತೆ ಸಮೀಪ ನೂತನವಾಗಿ ನಿರ್ಮಾಣಗೊಂಡ ಸಾರ್ವಜನಿಕ ಪ್ರಯಾಣಿಕರ ತಂಗುದಾಣ ಗ್ಯಾರೆಜ್ ಮಾಲಕರ ಸಂಘದ ಕೋಶಾಧಿಕಾರಿ ಹಾಗೂ ಬಾಲಾಜಿ ಸರ್ವಿಸ್ ಸ್ಟೇಷನ್ ನ ಮಾಲೀಕ ಪ್ರಶಾಂತ್ ಭಂಡಾರ್ಕರ್ ಉದ್ಘಾಟಿಸಿದರು.
ಮೋಹನ್ ದಾಸ್ ಭಂಡಾರಿಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಗ್ರಾಮದ ಹಿರಿಯರಾದ ತನಿಯಪ್ಪ ಬಂಗೇರ, ಸದಾಶಿವ ಆಚಾರ್ಯ, ಜಗನ್ನಾಥ್ ಮೈರನ್‌ಪಾದೆ, ಶಶಿಧರ್ ಬಾಳಿಗಾ, ರಾಮಸ್ವಾಮಿ ಭಂಡಾರಿಬೆಟ್ಟು, ಪುರಸಭೆ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು, ಚಂದ್ರಶೇಖರ್ ಸೇರಿದಂತೆ ಸ್ಥಳೀಯ ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Be the first to comment on "ಭಂಡಾರಿಬೆಟ್ಟು: ಸ್ಥಳೀಯರೇ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಉದ್ಘಾಟನೆ"