ಬಂಟ್ವಾಳ: ಬಿ.ಸಿ.ರೋಡ್ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆ ಅಂಗವಾಗಿ ಎರಡನೇ ಹಂತದ ಕರಸೇವೆ ಕಾರ್ಯಕ್ರಮ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ ನೇತೃತ್ವದಲ್ಲಿ ಭಾನುವಾರ ನಡೆಯಿತು.
ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಸಮಿತಿಗಳ ವಿವಿಧ ಪದಾಧಿಕಾರಿಗಳಾದ ಬಿ.ರಾಮಚಂದ್ರ ರಾವ್, ಐತಪ್ಪ ಪೂಜಾರಿ, ಇಂದಿರೇಶ್ ಸಹಿತ ಸಂಘ, ಸಂಸ್ಥೆಗಳ ಕಾರ್ಯಕರ್ತರು, ಸ್ಥಳೀಯರು, ಮಹಿಳಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡರು. ಈ ಸಂದರ್ಭ ದೇವಸ್ಥಾನದ ಹಂಚುಗಳನ್ನು ತೆಗೆಯುವ ಕಾರ್ಯ ನಡೆಯಿತು. ಕಳೆದ ಬಾರಿ ನೆಲಹಾಸುಗಳನ್ನು ತೆಗೆಯುವ ಕಾರ್ಯವನ್ನು ಶ್ರಮದಾನದ ಮೂಲಕ ಏರ್ಪಡಿಸಲಾಗಿತ್ತು.
Be the first to comment on "ಬಿ.ಸಿ.ರೋಡ್ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಎರಡನೇ ಹಂತದ ಕರಸೇವೆ"