ಬಂಟ್ವಾಳ: ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ನಿರ್ಮಾಣ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಬೃಹತ್ ಫ್ಲೈಓವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಗುರುವಾರ ಪಿಲ್ಲರ್ ಜೋಡಣೆಯ ಸಂದರ್ಭ ಕಬ್ಬಿಣದ ಸರಳುಗಳು ರಸ್ತೆಗೆ ಮಗುಚಿವೆ. ಈ ವೇಳೆ ಯಾವುದೇ ವಾಹನಗಳು ಸಾಗುತ್ತಿರದ ಕಾರಣ ಭಾರಿ ಅನಾಹುತವೊಂದು ತಪ್ಪಿಹೋಗಿದೆ.
ಫೈ ಓವರ್ ಗಾಗಿ ಪಿಲ್ಲರ್ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಪಿಲ್ಲರ್ ನಿರ್ಮಾಣಕ್ಕಾಗಿ ಕಬ್ಬಿಣದ ಸಲಾಕೆಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭ ಸ್ಥಳದಲ್ಲಿ ಕಬ್ಬಿಣದ ಸಲಾಕೆಗಳು ಸಂಪೂರ್ಣ ಭಾಗಿ ರಸ್ತೆಗೆ ಬಿದ್ದಿದೆ, ಘಟನೆ ವೇಳೆ ಯಾವುದೇ ವಾಹನ ಸಂಚಾರ ಇರಲಿಲ್ಲ.
ಮಳೆಗಾಲ ಸಂದರ್ಭ ಕೆಸರಿನ ಹೊಂಡದಿಂದ ವಾಹನ ಸವಾರರು ತೊಂದರೆ ಅನುಭವಿಸಿದೆ, ಮಳೆ ನಿಂತ ಕೂಡಲೇ ಧೂಳಿನ ಸ್ನಾನವಾಗುತ್ತಿತ್ತು. ಜೊತೆಗೆ ಫ್ಲೈಓವರ್ ನಿರ್ಮಾಣಕ್ಕೂ ಮುನ್ನ ಸಮರ್ಪಕ ಸರ್ವೀಸ್ ರಸ್ತೆ ನಿರ್ಮಿಸುವ ಕುರಿತು ಹಿಂದೆ ಸಂಸದರು ಸ್ಥಳ ಪರಿಶೀಲನೆ ಸಂದರ್ಭ ಗುತ್ತಿಗೆ ನಿರ್ಮಾಣದವರು ತಿಳಿಸಿದಂತೆ ರಸ್ತೆ ನಿರ್ಮಾಣಗೊಂಡರೂ ಅದು ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಹಗಲು ಹೊತ್ತಿನಲ್ಲೇ ಪಿಲ್ಲರ್ ಕಾಮಗಾರಿ ವೇಳೆ ಕುಸಿತ ಕಂಡುಬಂದಿರುವ ಹಿನ್ನೆಯಲ್ಲಿ ಕಾಮಗಾರಿ ಸಮರ್ಪಕವಾಗಿ ಹಾಗೂ ವೈಜ್ಞಾನಿಕವಾಗಿ ಗುಣಮಟ್ಟದೊಂದಿಗೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
Be the first to comment on "ಕಲ್ಲಡ್ಕ ಫ್ಲೈಓವರ್ ಪಿಲ್ಲರ್ ನಿರ್ಮಾಣ ವೇಳೆ ರಸ್ತೆಗೆ ಕುಸಿದ ಕಬ್ಬಿಣದ ಸರಳು; ತಪ್ಪಿದ ಅನಾಹುತ"