



ಬಂಟ್ವಾಳ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನಲ್ಲಿ ಸೆ.30ರಂದು ಶುಕ್ರವಾರ ಶ್ರೀ ಲಲಿತಾ ಪಂಚಮಿ ಮಹೋತ್ಸವ ಮತ್ತು ಶ್ರೀ ಚಂಡಿಕಾಯಾಗ ಕಾರ್ಯಕ್ರಮಗಳು ನೆರವೇರಲಿವೆ.
30ರಂದು ಬೆಳಗ್ಗಿನಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಬೆಳಗ್ಗೆ 10ರಿಂದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಧರ್ಮಸಭೆ, ವಿವಿಧ ಕಲಾಕ್ಷೇತ್ರಗಳ ಸಾಧಕರಿಗೆ ಶ್ರೀ ಗುರುದೇವಾನುಗ್ರಹ ಪ್ರಶಸ್ತಿ ಪ್ರದಾನ ನಡೆಯಲಿದೆ. 12.30ರಿಂದ ಯಾಗದ ಪೂರ್ಣಾಹುತಿ, ಮಹಾಸಂತರ್ಪಣೆ ನಡೆಯಲಿದೆ. ಅಪರಾಹ್ನ ಯಕ್ಷಗಾನ, ರಾತ್ರಿ ಅಷ್ಟಾವಧಾನ ಸೇವೆ ಸಹಿತ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಅಕ್ಟೋಬರ್ 5ರಂದು ಶ್ರೀ ಶಾರದಾ ಮಹೋತ್ಸವ ಮತ್ತು ವಿದ್ಯಾದಶಮಿ ಪ್ರಯುಕ್ತ ಅದೇ ದಿನ ಸಾಮೂಹಿಕ ವಿದ್ಯಾರಂಭ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Be the first to comment on "ಒಡಿಯೂರು ಕ್ಷೇತ್ರದಲ್ಲಿ ಶ್ರೀ ಲಲಿತಾಪಂಚಮಿ ಮಹೋತ್ಸವ, ಶ್ರೀಚಂಡಿಕಾಯಾಗ"