ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನಕ್ಕೆ ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣಾ ಸಮಿತಿಯ ವತಿಯಿಂದ ಸಮರ್ಪಣೆಯಾಗಲಿರುವ ನೂತನ ರಥದ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ಸೋಮವಾರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದ ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ. ಮಹೇಶ್ ಭಟ್ ಮಾತನಾಡಿ, ದೇವಾಡಿಗ ಸಮಾಜ ಹಾಗೂ ದೇವಸ್ಥಾನಕ್ಕೂ ವಿಶೇಷ ಸಂಬಂಧವಿರುವುದರಿಂದ ಸಮಾಜಕ್ಕೆ ಇಂತಹ ಅವಕಾಶ ಲಭಿಸಿದ್ದು, ತಂತ್ರಿಗಳ ಮಾರ್ಗದರ್ಶನದಂತೆ ರಥ ಸಮರ್ಪಣೆಯ ಜತೆಗೆ ಮೊದಲ ರಥೋತ್ಸವದ ಸೇವೆಯೂ ಅವರಿಂದ ನಡೆಯಲಿದೆ ಎಂದರು.
ಸಮರ್ಪಣಾ ಸಮಿತಿಯ ಅಧ್ಯಕ್ಷ ರಾಮದಾಸ್ ಬಂಟ್ವಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಫೆಬ್ರವರಿ 3ಕ್ಕೆ ರಥ ಸಮರ್ಪಣೆಯ ಕಾರ್ಯ ನಡೆಯಲಿದ್ದು,.ದೇವಾಡಿಗ ಸಮಾಜದ ಜತೆಗೆ ಎಲ್ಲಾ ಸಮಾಜದ ಆಸ್ತಿಕ ಬಂಧುಗಳ ಸಹಕಾರಿದಿಂದ ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ಈ ಕಾರ್ಯ ನೆರವೇರಲಿದೆ ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರಾಮಪ್ರಸಾದ್ ಪೂಂಜ ಬರಂಗೆರೆ, ಪಾಣೆಮಂಗಳೂರು ಸಿಎ ಬ್ಯಾಂಕ್ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಸಮರ್ಪಣಾ ಸಮಿತಿಯ ಗೌರವಾಧ್ಯಕ್ಷ ಸುಂದರ ಮೊಯ್ಲಿ, ಗೌರವ ಸಲಹೆಗಾರ ಪದ್ಮನಾಭ ದೇವಾಡಿಗ ಬಂಟ್ವಾಳ, ಹಿರಿಯರಾದ ಕಾಂತಾಡಿಗುತ್ತು ವಿಶ್ವನಾಥ ಆಳ್ವ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ರೂಪೇಶ್ ಆಚಾರ್ಯ, ಅಶೋಕ್ ಮೊದಲಾದವರಿದ್ದರು. ಸಮರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾಶಿವ ಮೊಯ್ಲಿ ಬೆಂಜನಪದವು ಸ್ವಾಗತಿಸಿದರು. ಉಪಾಧ್ಯಕ್ಷ ಸುರೇಶ್ ಕುಮಾರ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು. ಪ್ರವೀಣ್ ದೇವಾಡಿಗ ನೆಟ್ಲ ವಂದಿಸಿದರು.
Be the first to comment on "ನಂದಾವರ ದೇವಸ್ಥಾನಕ್ಕೆ ದೇವಾಡಿಗ ಸಮುದಾಯದಿಂದ ಶ್ರೀ ರಥ ಸಮರ್ಪಣೆ: ವಿಜ್ಞಾಪನಾ ಪತ್ರ ಬಿಡುಗಡೆ"