



ಬಂಟ್ವಾಳ: ಸಜಿಪಮೂಡ ಗ್ರಾಮದ ಮಿತ್ತಮಜಲು ಅಂಗನವಾಡಿ ಕೇಂದ್ರದ ಪಕ್ಕ ಎರಡು ಕುಟುಂಬಗಳ ಇಬ್ಬರು ಸದಸ್ಯರು ಅನಾರೋಗ್ಯಪೀಡಿತರಾಗಿದ್ದು, ಅವರ ಶೋಚನೀಯ ಪರಿಸ್ಥಿತಿ ಕಂಡು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ ಮತ್ತು ಸಾಮಾಜಿಕ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದರು. ಎರಡು ತಿಂಗಳಿಂದ ಕುಟುಂಬದ ಮೂವರ ಪೈಕಿ ಇಬ್ಬರಿಗೆ ಅನಾರೋಗ್ಯ ಉಂಟಾಗಿದ್ದು, ಪರಿಸ್ಥಿತಿ ಹದಗೆಟ್ಟಿತ್ತು. ಇದನ್ನು ತಿಳಿದು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಾಕ್ಷಿ ಹಾಗೂ ಉಪಾಧ್ಯಕ್ಷರಾದ ಎಸ್ ಸಿದ್ದಿಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಯಾ, ಅರೋಗ್ಯ ಸಹಾಯಕಿ ರೋಹಿಣಿ, 1 ನೇ ವಾರ್ಡ್ ಆಶಾ ಕಾರ್ಯಕರ್ತೆ ಗೀತಾ ರೋಗಿಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಮನೆ ದುರಸ್ತಿ ಮಾಡಿಕೊಡುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ. ಈ ಸಂದರ್ಭ ಸಮಾಜಸೇವಕರಾದ ಸಿದ್ದಿಕ್ ನಡಿಗುತ್ತು, ಮಾಲಿಕ್ ಪಿ ಜೆ ಉಪಸ್ಥಿತರಿದ್ದರು.
Be the first to comment on "ಮಿತ್ತಮಜಲಿನ ಕುಟುಂಬಗಳ ಸದಸ್ಯರಿಗೆ ನೆರವು"