ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಗುರುವಾರ ಸಂಜೆ ಸಂಗೀತ ರಸಮಂಜರಿ ಏರ್ಪಡಿಸುವುದರೊಂದಿಗೆ ಸೆ.9ರಂದು ಆರಂಭಗೊಂಡಿದ್ದ ಜೇಸಿ ಸಪ್ತಾಹ 2022ಕ್ಕೆ ತೆರೆ ಬಿದ್ದಿದೆ. ಜೋಡುಮಾರ್ಗ ಜೇಸಿ ವತಿಯಿಂದ ಆಯೋಜಿಸಲಾದ ಸಪ್ತಾಹ ಹಲವು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಅಧ್ಯಕ್ಷ ಹರಿಪ್ರಸಾದ್ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಿರ್ದೇಶಕಿ ಗಾಯತ್ರಿ ಲೋಕೇಶ್, ಕಾರ್ಯದರ್ಶಿ ಕಿಶನ್ ರಾವ್, ಪೂರ್ವಾಧ್ಯಕ್ಷರಾದ ರಾಮಚಂದ್ರ ರಾವ್, ಅಹಮದ್ ಮುಸ್ತಫಾ, ಮಹಮ್ಮದ್, ಸತ್ಯನಾರಾಯಣ ರಾವ್, ರಾಘವೇಂದ್ರ ಹೊಳ್ಳ, ಹರ್ಷರಾಜ್, ವಸಂತ್, ಶ್ರೀನಿಧಿ ಭಟ್, ಕೃಷ್ಣರಾಜ ಭಟ್, ಜಯಾನಂದ ಪೆರಾಜೆ, ನಿಕಟಪೂರ್ವ ಅಧ್ಯಕ್ಷೆ ಶೈಲಜಾ ರಾಜೇಶ್ ಸಹಿತ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಜೇಸಿ ಸಪ್ತಾಹದಂಗವಾಗಿ ನೀಡುವ 2022ರ ಜೇಸಿ ಕಮಲಪತ್ರವನ್ನು ಪೂರ್ವಾಧ್ಯಕ್ಷ ಹರ್ಷರಾಜ್ ಅವರಿಗೆ ನೀಡಿ ಗೌರವಿಸಲಾಯಿತು. ಸಪ್ತಾಹದ ಅಂಗವಾಗಿ ಕೋಸ್ಟಲ್ ಬುಲೆಟಿನ್ ಸುದ್ದಿ ಜಾಲತಾಣದ ಸಂಪಾದಕ ಸಂತೋಷ್ ನೆತ್ತರಕೆರೆ ಮತ್ತು ಜೇಸಿ ಸದಸ್ಯ ಹರೀಶ ಮಾಂಬಾಡಿ ಅವರನ್ನು ಸನ್ಮಾನಿಸಲಾಯಿತು. ಮಿಥುನ್ ರಾಜ್ ವಿದ್ಯಾಪುರ ಅವರ ಶ್ರೀರಾಜ್ ಮ್ಯೂಸಿಕಲ್ ವರ್ಲ್ಡ್ ಅವರಿಂದ ಜೋಡುಮಾರ್ಗ ಮ್ಯೂಸಿಕಲ್ ನೈಟ್ ನಲ್ಲಿ ಕನ್ನಡ ಮತ್ತು ತುಳು ಹಾಡುಗಳನ್ನು ಮಹಿಮಾ ಮಂಗಳೂರು, ಮಿಥುನ್ ರಾಜ್ ವಿದ್ಯಾಪುರ, ಚೈತ್ರಾ ಕಡಂಬಾರ್, ದಿನೇಶ್ ಕರೋಪಾಡಿ ಹಾಡಿದರು. ಕೀಬೋರ್ಡ್ ನಲ್ಲಿ ಬಾಬಣ್ಣ ಪುತ್ತೂರು ಮತ್ತು ರಿದಂ ಪ್ಯಾಡ್ ನಲ್ಲಿ ರವಿಕಾಂತ್ ಕಾಸರಗೋಡು ಸಹಕರಿಸಿದರು. ಮಂಜು ರೈ ಮುಳೂರು ಕಾರ್ಯಕ್ರಮ ನಿರ್ವಹಿಸಿದರು.
ವೈವಿಧ್ಯಮಯ ಕಾರ್ಯಕ್ರಮ: ಸೆ.9ರಂದು ರೋಟರಿ ಟೌನ್ ಸಹಯೋಗದೊಂದಿಗೆ ದಂತ ಆರೋಗ್ಯ ಪರೀಕ್ಷೆ ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ನಡೆದರೆ, ಅದೇ ದಿನ ಸಂಜೆ ಪೂರ್ವಾಧ್ಯಕ್ಷ ಹರ್ಷರಾಜ್ ಪ್ರಾಯೋಜಕತ್ವದಲ್ಲಿ ಪೊಳಲಿ ಶ್ರೀ ರಾಮಕೃಷ್ಣಾಶ್ರಮದಲ್ಲಿ ಆಹಾರ ವಿತರಣೆ ನಡೆಯಿತು. ಬಳಿಕ ರೋಟರಿ ಕ್ಲಬ್ ಬಂಟ್ವಾಳ ಟೌನ್ ಜೊತೆ ಜಂಟಿ ಸಭೆ ಮತ್ತು ಮಹಿಳಾ ಸಾಧಕರಿಗೆ ಗೌರವಾರ್ಪಣೆ ಪ್ರೀತಿ ಕಾಂಪ್ಲೆಕ್ಸ್ ಬಿ.ಸಿ.ರೋಡುನಲ್ಲಿ ನಡೆಯಿತು.
ಸೆ.10ರಂದು ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಕ್ರೀಡಾಸ್ಪರ್ಧೆ, ನಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕುಡಿಯುವ ನೀರಿನ ಘಟಕ ಕೊಡುಗೆ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಸೆ.11ರಂದು ಪರಿಣಾಮಕಾರಿ ಭಾಷಣ ಕಲೆ ಕಾರ್ಯಾಗಾರ ಮತ್ತು ಹಿರಿಯ ಜೇಸಿಗಳೊಂದಿಗೆ ಸಂವಾದ ನಡೆದವು. ಪರಿಣಾಮಕಾರಿ ಭಾಷಣ ಕಲೆ ಕುರಿತು ಪೂರ್ವಾಧ್ಯಕ್ಷರೂ ಆಗಿರುವ ಡಾ. ರಾಘವೇಂದ್ರ ಹೊಳ್ಳ ನಡೆಸಿಕೊಟ್ಟರೆ, ವಿಕ್ರಮ್ ನಾಯಕ್ ಸಹಕರಿಸಿದರು. 2ರಂದು ಸೈಬರ್ ಅಪರಾಧಗಳು ಕಾನೂನು ಮಾಹಿತಿ ಕಾರ್ಯಕ್ರಮ ಶಂಭೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದ್ದು, ನ್ಯಾಯವಾದಿ ರವೀಂದ್ರ ಕುಕ್ಕಾಜೆ ನಡೆಸಿಕೊಟ್ಟರು.
Be the first to comment on "ಸಂಗೀತ ರಸಮಂಜರಿ ಕಾರ್ಯಕ್ರಮದೊಂದಿಗೆ ಜೋಡುಮಾರ್ಗ ಜೇಸಿ ಸಪ್ತಾಹ 2022ಕ್ಕೆ ತೆರೆ"