ಬಂಟ್ವಾಳ: ಜೋಡುಮಾರ್ಗ ನೇತ್ರಾವತಿ ಜೇಸಿ ವತಿಯಿಂದ ಜೇಸಿ ಸಪ್ತಾಹಕ್ಕೆ ಚಾಲನೆ ದೊರಕಿದೆ. ಮೊದಲ ದಿನದ ಕಾರ್ಯಕ್ರಮಗಳಲ್ಲಿ ಶಂಭೂರು ಬೊಂಡಾಲ ಪ್ರೌಢಶಾಲೆಯಲ್ಲಿ ಆರೋಗ್ಯ ತಪಾಸಣೆ, ಪೊಳಲಿಯಲ್ಲಿ ಮಕ್ಕಳಿಗೆ ಆಹಾರ ವಿತರಣೆ, ಬಿ.ಸಿ.ರೋಡಿನಲ್ಲಿ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು.
ಸಪ್ತಾಹಕ್ಕೆ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಯಿತು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಯಿತು. ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ ಉದ್ಘಾಟಿಸಿದರು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಜೇಸಿ ಜೋಡುಮಾರ್ಗ ಅಧ್ಯಕ್ಷರಾದ ಹರಿಪ್ರಸಾದ್ ಕುಲಾಲ್ ವಹಿಸಿದ್ದರು. ದಂತ ವೈದ್ಯರಾದ ಡಾ. ನವ್ಯ ಜಯದೀಪ್ ವಿದ್ಯಾರ್ಥಿಗಳ ದಂತ ಪರೀಕ್ಷೆ ಮಾಡಿದರು.
ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಕ್ಕಳಿಗೆ ಆಹಾರ ವಿತರಿಸಲಾಯಿತು. ಈ ಸಂದರ್ಭ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಸಂಜೆ ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ಜೋಡುಮಾರ್ಗ ಜೇಸಿಯ ಜಂಟಿ ಸಭೆಯಲ್ಲಿ ಮಹಿಳಾ ಉದ್ಯಮಿಗಳಾದ ಸುಗುಣ, ಸುಜಾತ, ಕಲ್ಪನಾ ಅವರನ್ನು ಗೌರವಿಸಲಾಯಿತು. ಜೇಸಿ ಪೂರ್ವಾಧ್ಯಕ್ಷರಾದ ಬಿ.ರಾಮಚಂದ್ರ ರಾವ್ ಮತ್ತು ಅಹಮದ್ ಮುಸ್ತಫಾ ಜೇಸಿ ಕುರಿತು ಹಾಗೂ ರೋಟರಿ ಟೌನ್ ನಿಕಟಪೂರ್ವಾಧ್ಯಕ್ಷರಾದ ಶನ್ಫತ್ ಶರೀಫ್ ಮತ್ತು ಜಯರಾಜ್ ಬಂಗೇರ ರೋಟರಿ ಕುರಿತು ಮಾತನಾಡಿದರು. ಜೇಸಿ ನಿಕಟಪೂರ್ವ ಅಧ್ಯಕ್ಷೆ ಶೈಲಜಾ ರಾಜೇಶ್ ಶುಭ ಹಾರೈಸಿದರು.
ವಿವಿಧ ಕಾರ್ಯಕ್ರಮಗಳಲ್ಲಿ ಜೇಸಿ ಮತ್ತು ರೋಟರಿ ಕ್ಲಬ್ ನ ಪ್ರಮುಖರಾದ ಹರ್ಷರಾಜ್ ಸಿ, ಶ್ರೀನಿಧಿ ಭಟ್, ಪಿ.ಮುಹಮ್ಮದ್, ಶೈಲಜಾ ರಾಜೇಶ್, ಸತ್ಯನಾರಾಯಣ ರಾವ್, ಕಿಶನ್ ರಾವ್, ಗಾಯತ್ರಿ ಲೋಕೇಶ್, ಅಶ್ವಿನಿ ಬಿ.ಎಸ್, ದೀಪ್ತಿ ಶ್ರೀನಿಧಿ, ರೇಖಾ ರಾವ್, ಕಿಶೋರ್ ಕುಮಾರ್, ಸುರೇಶ್ ಸಾಲಿಯಾನ್, ಉಮೇಶ್ ಆರ್. ಮೂಲ್ಯ, ನಾಗೇಶ್, ಸುಕುಮಾರ್ ಮತ್ತಿತರರು ಹಾಜರಿದ್ದರು.
Be the first to comment on "ಜೋಡುಮಾರ್ಗ ನೇತ್ರಾವತಿ ಜೇಸಿ ವತಿಯಿಂದ ಜೇಸಿ ಸಪ್ತಾಹಕ್ಕೆ ಚಾಲನೆ, ಸಾಧಕಿಯರ ಸನ್ಮಾನ, ಆರೋಗ್ಯ ಶಿಬಿರ"