ಬಂಟ್ವಾಳ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ಇದರ ವತಿಯಿಂದ ಪಿಲಾತಬೆಟ್ಟು ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ ಮಾಡಲಾಗಿದೆ. ಪ್ರತೀ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಮಾಡುವ ಜಲ ಜೀವನ್ ಮಿಷನ್ ಆಶಯದಂತೆ ಎಲ್ಲಾ ಮನೆಗಳಿಗೂ ನಳ್ಳಿ ಸಂಪರ್ಕ ಕಲ್ಪಿಸಲಾಗಿದ್ದು ಈಗ ಪಂಚಾಯತ್ ತನ್ನ ಗುರಿ ಮುಟ್ಟಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷೆ ಹರ್ಷಿಣಿ, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಯಮನಪ್ಪ ಕೊರವರˌ ಪಂಚಾಯತ್ ಸದಸ್ಯರುˌ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಪಂಪು ಚಾಲಕರು ˌಆಶಾ ಕಾರ್ಯಕರ್ತೆಯರು ˌಆರೋಗ್ಯ ಸಹಾಯಕಿಯರು ಗ್ರಾಮಸ್ಥರು ಹಾಗೂ ಫಲಾನುಭವಿಗಳ ಸಮ್ಮುಖದಲ್ಲಿ ಪಿಲಾತಬೆಟ್ಟು ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವೆಂದು ಘೋಷಣೆ ಮಾಡಲಾಯಿತು. ಜಲಜೀವನ್ ಮಿಷನ್ ನ ಯೋಜನಾ ವ್ಯವಸ್ಥಾಪಕ ವಿಘ್ನೇಶ್ ರಾಜ್ ˌ ಕಿರಿಯ ಅಭಿಯಂತರ ಕೃಷ್ಣ ˌ ಇಂಜಿನಿಯರ್ ಅಶ್ವಿನ್ˌ ಅನುಷ್ಠಾನ ಬೆಂಬಲ ಸಂಸ್ಠೆಯ ಚರಣ್ ರಾಜ್ˌ ಅನುಷ್ಥಾನ ಬೆಂಬಲ ಸಂಪನ್ಮೂಲ ಸಂಸ್ಠೆಯ ಸಿಬ್ಬಂದಿ ಉಪಸ್ಥಿತರಿದ್ದರು
Be the first to comment on "ಪಿಲಾತಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಹರ್ ಘರ್ ಜಲ್ ಘೋಷಣೆ"