ಬಂಟ್ವಾಳ: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವು ೨೦೨೨-೨೩ನೇ ಸಾಲಿನಲ್ಲಿ ಪ್ರಾರಂಭಗೊಂಡಿದ್ದು ರೈತರೇ ಮೊಬೈಲ್ ಉಪಯೋಗಿಸಿ ಬೆಳೆ ಸಮೀಕ್ಷೆ ಮಾಡುವ ಆಪ್ ಅನ್ನು ಸರಕಾರವು ಇನ್ನಷ್ಟು ಸರಳಗೊಳಿಸಿದೆ ಎಂದು ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಂದನ್ ಶೆಣೈ ತಿಳಿಸಿದ್ದಾರೆ.
ಈ ಹಿಂದೆ ರೈತರ ಆಪ್‌ನಲ್ಲಿ ಗ್ರಾಮದ ಎಲ್ಲ ಸರ್ವೆ ನಂಬರ್ ಡೌನ್‌ಲೋಡ್ ಆಗುತ್ತಿತ್ತು. ಪ್ರಸಕ್ತ ಆಧಾರ್ ಸಂಖ್ಯೆ ನಮೂದಿಸುವ ಮೂಲಕ ಒಬ್ಬ ರೈತರ ಮಾತ್ರ ಪಹಣಿ (ಸರ್ವೇ ನಂ) ಡೌನ್‌ಲೋಡ್ ಆಗುತ್ತದೆ. ಇದಕ್ಕಾಗಿ ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಅಭಿವೃದ್ಧಿ ಪಡಿಸಲಾಗಿದ್ದ ಈ ಮೊಬೈಲ್ ಆಪ್‌ನಲ್ಲಿ ಆಧಾರ್ ಸಂಖ್ಯೆ ದಾಖಲಿಸಿ ತದನಂತರ ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಒಟಿಪಿ ದಾಖಲಿಸಿದರೆ ಈ ಆಧಾರ್‌ಗೆ ಜೋಡಣೆಯಾಗಿರುವ ಎಫ್‌ಐಡಿ ನಂಬರ್ ಮತ್ತು ಸರ್ವೇ ನಂಬರ್‌ಗಳು ಡೌನ್ಲೋಡ್ ಆಗುತ್ತವೆ. ತಾಲೂಕಿನ ರೈತರು ನಿಗದಿತ ಅವಧಿಯೊಳಗೆ ಮೊಬೈಲ್ ಆಪ್‌ನಲ್ಲಿ ತಮ್ಮ ಜಮೀನಿನ ಸರ್ವೇ ನಂಬರ್‌ವಾರು ಬೆಳೆ ವಿವರವನ್ನು ನಿಖರವಾಗಿ ದಾಖಲಿಸಿ ಮುಂಗಾರು-೨೦೨೨ರ ಬೆಳೆ ಸಮೀಕ್ಷೆ ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ಕೋರಿದೆ.
Be the first to comment on "ಬೆಳೆ ಸಮೀಕ್ಷೆ ಆಪ್ ಇನ್ನಷ್ಟು ಸರಳ"