ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಪರಿಸರಸ್ನೇಹಿ ವಿದ್ಯಾಲಯ ರಾಜ್ಯಮಟ್ಟದ ಕಾರ್ಯಾಗಾರವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಕಡ್ಕ ಉದ್ಘಾಟಿಸಿದರು. ಪರ್ಯಾವರಣ ಸಂರಕ್ಷಣಾ ಗತಿವಿಧಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜಲವನ್ನು ಹಿತಮಿತವಾಗಿ ಬಳಸಬೇಕು. ಅಪವ್ಯಯ ಸಲ್ಲದು. ನಮಗೆ ಸರ್ವವನ್ನೂಕೊಟ್ಟಿರುವ ಭೂಮಿ, ಮಾತೃ ಭೂಮಿರಕ್ಷಣೆ ನಮ್ಮ ಧ್ಯೇಯವಾಗಬೇಕು ಎಂದು ಹೇಳಿದರು.
ಪರ್ಯಾವರಣ ಸಂರಕ್ಷಣಾ ಗತಿವಿಧಿಯ ಸಂಯೋಜಕರಾದ ವೆಂಕಟೇಶ ಸಂಗನಾಳ ಮತ್ತು ನರಸಿಂಹ ಪ್ರಸಾದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀರಾಮ ಪದವಿ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಕೃ?ಪ್ರಸಾದ ಕಾಯರ್‌ಕಟ್ಟೆ ತಮ್ಮ ವಿದ್ಯಾಸಂಸ್ಥೆಯಲ್ಲಿ ಅಳವಡಿಸಿಕೊಂಡಿರುವ ಪರಿಸರ ಸ್ನೇಹಿ ಅಂಶ ಕುರಿತು ವಿವರಿಸಿದರು. ೧೨೦ಕ್ಕೂ ಅಧಿಕ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮತಮ್ಮ ಶಾಲೆಗಳಲ್ಲಿ ಪರಿಸರ ಸ್ನೇಹಿ ಅಂಶಗಳನ್ನು ಅಳವಡಿಸಿಕೊಳ್ಳಲು ಸಹಮತಿಸಿದರು. ಅರುಣಕುಮಾರ ಸ್ವಾಗತಿಸಿದರು. ಗಾಯತ್ರಿ ಪ್ರಾರ್ಥಿಸಿದರು. ಚಂದ್ರಹಾಸ ಪಿ. ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಪರಿಸರಸ್ನೇಹಿ ವಿದ್ಯಾಲಯ ರಾಜ್ಯಮಟ್ಟದ ಕಾರ್ಯಾಗಾರ"