

ಮಂಗಳೂರು: ಉಡುಪಿ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗೋಪಾಲಕೃಷ್ಣ ಗಾವಂಕರ್ ಎಮ್. ಮಾರ್ಗದರ್ಶನದಲ್ಲಿ ಮಂಗಳೂರಿನ ರಥಬೀದಿಯ ಡಾ. ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪುರುಷೋತ್ತಮ ಭಟ್ ಎನ್. ಸಿದ್ಧಪಡಿಸಿದ ‘ಆನ್ ಇಕೊನೊಮಿಕ್ ಅನಾಲಿಸಿಸ್ ಆಫ್ ಯುಟಿಲೈಸೇಶನ್ ಆಫ್ ಹೆಲ್ತ್ ಕೇರ್ ಸರ್ವೀಸಸ್- ಎ ಕೇಸ್ ಸ್ಟಡಿ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್’ ಎಂಬ ಮಹಾಪ್ರಬಂಧಕ್ಕೆ ಕೊಯಂಬತ್ತೂರಿನ ಭಾರತೀಯಾರ್ ವಿಶ್ವವಿದ್ಯಾನಿಲಯ ಪಿ.ಎಚ್.ಡಿ. ಪ್ರದಾನ ಮಾಡಿದೆ. ಇವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿನ ಹಳೆ ವಿದ್ಯಾರ್ಥಿ. ಯಕ್ಷಗಾನ ಹವ್ಯಾಸಿ ಭಾಗವತರೂ ಆಗಿದ್ದಾರೆ.
Be the first to comment on "ಪುರುಷೋತ್ತಮ ಭಟ್ ಎನ್. ಅವರಿಗೆ ಡಾಕ್ಟರೇಟ್"