ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ‘ಅರಿವು’ ವಿಶೇಷ ಮಕ್ಕಳ ತರಬೇತಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು. ಈ ಸಂದರ್ಭ ಮಕ್ಕಳು ಕೃಷ್ಣ ವೇಷ ಧರಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಅರಿವು ವಿಶೇಷ ಹಾಗೂ ಕಲಿಕಾ ಸಮಸ್ಯೆ ಇರುವ ಮಕ್ಕಳಿಗೆ ತರಬೇತಿ ಕೊಡುವ ಕೇಂದ್ರವಾಗಿದ್ದು ಸಮಸ್ಯೆ ಇರುವ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದೆ.
ಲಯನ್ಸ್ ನೇತ್ರಾವತಿ ಕ್ಲಬ್ ಅಧ್ಯಕ್ಷರು ಹಾಗೂ ತಂಡದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದ್ದು ಕೃಷ್ಣ ಆರತಿ, ನೃತ್ಯ, ಚಂಡೆ ಪ್ರದರ್ಶನ ವಿಶೇಷ ಆಕರ್ಷಣೆ ಆಗಿತ್ತು.
ನಿವೃತ್ತ ಮುಖ್ಯ ಶಿಕ್ಷಕಿ ಉದಯಕುಮಾರಿ, ಅಂಗನವಾಡಿ ಅಧ್ಯಕ್ಷೆ ಆಶಾಲತಾ ವಿಶೇಷ ಆಹ್ವಾನಿತಾರಾಗಿ ಶುಭ ಹಾರೈಸಿದರು . ಲಯನ್ಸ್ ನೇತ್ರಾವತಿ ಅಧ್ಯಕ್ಷೆ ಆಶಾಲತಾ ಮಾತನಾಡಿ ಲಯನ್ಸ್ ನೇತ್ರಾವತಿ ವಿಶೇಷ ಮಕ್ಕಳ ಅಭಿವೃದ್ಧಿಗೆ ಸದಾ ಬೆಂಬಲ ನೀಡುತ್ತದೆ ಎಂದರು.
Be the first to comment on "ಕೃಷ್ಣ ವೇಷ ಧರಿಸಿ ಗಮನ ಸೆಳೆದ ‘ಅರಿವು’ ಮಕ್ಕಳು"