ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 28.5 ಕೋಟಿ ರೂ ಮೊತ್ತದ 56 ಗ್ರಾಮಗಳ 231 ಕಾಮಗಾರಿ ಮತ್ತು ಲೋಕೋಪಯೋಗಿ ಇಲಾಖೆಯ 73.75 ಕೋಟಿ ರೂ ಮೊತ್ತದ 22 ಕಾಮಗಾರಿಗಳು ಸೇರಿ ಒಟ್ಟು 102.5 ಕೋಟಿ ರೂ ಮೊತ್ತದ 253 ಕಾಮಗಾರಿಗಳ ಶಿಲಾನ್ಯಾಸ ಮತ್ತು ಕಾರ್ಯಾರಂಭ ಆಗಸ್ಟ್ 23ರಂದು ಕ್ಷೇತ್ರದ ವಿವಿಧೆಡೆ ನಡೆಯಲಿದೆ.
ಕಾರ್ಯಕ್ರಮವು ಬೆಳಗ್ಗೆ 7 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಪೂಜೆ ಬಳಿಕ ಪೊಳಲಿಯಲ್ಲಿ ಆರಂಭಗೊಳ್ಳಲಿದೆ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದ್ದಾರೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಕ್ಷೇತ್ರದಾದ್ಯಂತ ಶಿಲಾನ್ಯಾಸ ಮತ್ತು ಕಾರ್ಯಾರಂಭ ಕಾರ್ಯ ನೆರವೇರಿಸಲಿದ್ದಾರೆ.
ಬೆಳಗ್ಗೆ 7 ಗಂಟೆಗೆ 40 ಲಕ್ಷ ರೂ ವೆಚ್ಚದಲ್ಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಹಿಂಬದಿ ಚರಂಡಿ ನಿರ್ಮಾಣ, 10 ಲಕ್ಷ ರೂ ವೆಚ್ಚದಲ್ಲಿ ಶ್ರೀ ಪೊಳಲಿ ರಾಮಕೃಷ್ಣ ತಪೋವನ ರಸ್ತೆ , 28 ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಬಂಟ್ವಾಳ ಕ್ಷೇತ್ರದ 56 ಗ್ರಾಮಗಳ 231 ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಬಳಿಕ ಬೆಳಗ್ಗೆ 9 ಗಂಟೆಗೆ ಅರಳ ದ್ವಾರದ ಬಳಿ 4.10 ಕೋಟಿ ರೂ ಮೂಲರಪಟ್ಣ ಸೊರ್ನಾಡು ರಸ್ತೆ, 1.25 ಕೋಟಿ ರೂ ವೆಚ್ಚದಲ್ಲಿ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ರಸ್ತೆ, ಬೆಳಗ್ಗೆ 10ಕ್ಕೆ ಅಣ್ಣಳಿಕೆಯಲ್ಲಿ 2 ಕೋಟಿ ರೂ ವೆಚ್ಚದಲ್ಲಿ ರಾಯಿ ಅಣ್ಣಳಿಕೆ ರಸ್ತೆ, ಬೆಳಗ್ಗೆ 10.45ಕ್ಕೆ ಮೈಂದಾಳದಲ್ಲಿ 7 ಕೋಟಿ ರೂ ವೆಚ್ಚದಲ್ಲಿ ಮಣಿಹಳ್ಳ ಸರಪಾಡಿ ಬಜ ರಸ್ತೆ, 11.15ಕ್ಕೆ ಸರಪಾಡಿಯಲ್ಲಿ 3 ಕೋಟಿ ರೂ ವೆಚ್ಚದಲ್ಲಿ ಸರಪಾಡಿ ಪೆರ್ಲ ಬೀಯಪಾದೆ ರಸ್ತೆ, ಮುಲ್ಕಜೆಮಾಡದಲ್ಲಿ 7 ಕೋಟಿ ರೂ ವೆಚ್ಚದಲ್ಲಿ ಕುಂಟಾಲಪಲ್ಕೆ ಉಳಿ ರಸ್ತೆ, 12.30ಕ್ಕೆ ಪಣೋಲಿಬೈಲ್ ನಲ್ಲಿ 13 ಕೋಟಿ ರೂ ವೆಚ್ಚದ ಮಾರ್ನಬೈಲ್ ಮಂಚಿ ಸಾಲೆತ್ತೂರು ರಸ್ತೆ, 2.4 ಕೋಟಿ ರೂ ವೆಚ್ಚದಲ್ಲಿ ಮೆಲ್ಕಾರ್ ಮಾರ್ನಬೈಲ್ ರಸ್ತೆ, 2 ಕೋಟಿ ರೂ ವೆಚ್ಚದಲ್ಲಿ ಬೊಳ್ಳಾಯಿ ಕಂಚಿಲ ಮಂಚಿ ರಸ್ತೆ, 1.30ಕ್ಕೆ 2 ಕೋಟಿ ರೂ ವೆಚ್ಚದಲ್ಲಿ ನರಹರಿ ಪರ್ವತದಲ್ಲಿ ನರಹರಿ ಶ್ರೀ ಸದಾಶಿವ ದೇವಸ್ಥಾನ ರಸ್ತೆ, 3 ಕೋಟಿ ರೂ ವೆಚ್ಚದಲ್ಲಿ ಕಲ್ಲಡ್ಕ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆ, ಮಧ್ಯಾಹ್ನ 3ಕ್ಕೆ 1.5 ಕೋಟಿ ರೂ ವೆಚ್ಚದಲ್ಲಿ ಕೋಡಪದವು ಮಂಗಳಪದವು ರಸ್ತೆ, ಸಂಜೆ 4ಕ್ಕೆ ಮಾಣಿ ಮಾಡದಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ಮಾಡ ರಸ್ತೆ, ಸಂಜೆ 4.45ಕ್ಕೆ ವ್ಯಾಯಾಮ ಶಾಲೆಯಲ್ಲಿ 4.95 ಕೋಟಿ ರು ವೆಚ್ಚದಲ್ಲಿ ಸುಧೆಕಾರು ಕಕ್ಕೆಮಜಲು ಕಾಪಿಕಾಡು ರಸ್ತೆ, ಸಂಜೆ 5.15ಕ್ಕೆ ಮೊಗರ್ನಾಡಿನಲ್ಲಿ 4.95 ರೂ ವೆಚ್ಚದ ನರಿಕೊಂಬು ದಾಸಕೋಡಿ ರಸ್ತೆ ಹಾಗೂ ಸಂಜೆ 5.45ಕ್ಕೆ 2.5 ಕೋಟಿ ರೂ ವೆಚ್ಚದಲ್ಲಿ ಬೆಂಜನಪದವಿನಲ್ಲಿ ಬೆಂಜನಪದವು ಪಿಲಿಬೊಟ್ಟು ರಸ್ತೆ ಕಾಮಗಾರಿ ಶಿಲಾನ್ಯಾಸ ಮತ್ತು ಕಾರ್ಯಾರಂಭಗೊಳಿಸಲಾಗುವುದು ಎಂದು ದೇವಪ್ಪ ಪೂಜಾರಿ ತಿಳಿಸಿದ್ದಾರೆ. ಆಗಸ್ಟ್ 31ರಂದು ಬುಧವಾರ ವಿನಾಯಕ ಚೌತಿ ಸಂದರ್ಭ ಶ್ರೀ ಕ್ಷೇತ್ರ ನಂದಾವರದಲ್ಲಿ 9.75 ಕೋಟಿ ರೂಗಳ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದವರು ತಿಳಿಸಿದ್ದಾರೆ.
Be the first to comment on "ಶಾಸಕ ರಾಜೇಶ್ ನಾಯ್ಕ್ ಅವರಿಂದ 102.5 ಕೋಟಿ ರೂ ಅನುದಾನ, 253 ಗ್ರಾಮೀಣ ರಸ್ತೆ ಅಭಿವೃದ್ಧಿ"