ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಆವರಣದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಸಹಯೋಗದೊಂದಿಗೆ ತುಳುಕೂಟ ಬಂಟ್ವಾಳ ಆಶ್ರಯದಲ್ಲಿ ಸಾರ್ವಜನಿಕರಿಗೆ ಪಾಲೆದ ಕೆತ್ತೆ ಕಷಾಯ ವಿತರಣೆ ಗುರುವಾರ ಆಟಿ ಅಮವಾಸ್ಯೆ ಪ್ರಯುಕ್ತ ನಡೆಯಿತು.
ತುಳುಕೂಟ ಬಂಟ್ವಾಳದ ಗೌರವಾಧ್ಯಕ್ಷ ಎ.ಸಿ.ಭಂಡಾರಿ ಅವರು ಕಷಾಯ ವಿತರಣೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ತುಳುನಾಡಿನ ಆಚರಣೆ, ಸಂಪ್ರದಾಯಗಳು ಹಾಗೂ ಸಂಸ್ಕೃತಿಯನ್ನು ಜೀವಂತವಾಗಿರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಆಟಿ ತಿಂಗಳ ವಿಶೇಷತೆಯನ್ನು ಸಾರುವ ಆಟಿ ಅಮವಾಸ್ಯೆ ಕಷಾಯ ವಿತರಣೆ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದಿದೆ ಎಂದು ಹೇಳಿದರು.
ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಕಾರ್ಯಕ್ರಮದ ಮಹತ್ವದ ಕುರಿತು ವಿವರಿಸಿದರು, ಶ್ರೀ ರಕ್ತೇಶ್ವರಿ ದೇವಸ್ಥಾನ ದ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ್ , ಮಾಜಿ ಅಧ್ಯಕ್ಷ ರಾಜೇಶ್ ಎಲ್. ನಾಯಕ್, ತುಳುಕೂಟದ ಕಾರ್ಯದರ್ಶಿ ಎಚ್.ಕೆ. ನಯನಾಡು, ಪದಾಧಿಕಾರಿಗಳಾದ ನಾರಾಯಣ ಸಿ.ಪೆರ್ನೆ, ಸುಕುಮಾರ್ ಬಂಟ್ವಾಳ, ಸೀತಾರಾಮ ಶೆಟ್ಟಿ, ದೇವಪ್ಪ ಕುಲಾಲ್, ಪರಮೇಶ್ವರ ಮೂಲ್ಯ, ಶೇಷಪ್ಪ ಮಾಸ್ಟರ್, ಹರೀಶ್, ಸತೀಶ್ ಬಿ.ಸಿ.ರೋಡ್, ಪದ್ಮನಾಭ ರೈ, ಪ್ರಕಾಶ್ ಶೆಟ್ಟಿ ಶ್ರೀಶೈಲ, ಸದಾಶಿವ ಪುತ್ರನ್, ನಿತೇಶ್ ಪಲ್ಲಿಕಂಡ ಶಿವಶಂಕರ್, ದಾಮೋದರ ಏರ್ಯ ಮತ್ತಿತರರು ಉಪಸ್ಥಿತರಿದ್ದರು. ತುಳುಕೂಟ ಕಾರ್ಯದರ್ಶಿ ಎಚ್ಕೇ ನಯನಾಡು ಸ್ವಾಗತಿಸಿ, ನಿರೂಪಿಸಿದರು.
Be the first to comment on "ತುಳುಕೂಟ ಬಂಟ್ವಾಳ ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ಪಾಲೆದ ಕೆತ್ತೆ ಕಷಾಯ ವಿತರಣೆ"