ಬಂಟ್ವಾಳ: ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಉಪನ್ಯಾಸಕ,ಹಿರಿಯ ನಾಟಕಕಾರ ಎಂ. ಡಿ. ಮಂಚಿ ಅಭಿಪ್ರಾಯಪಟ್ಟರು.
ಮೆಲ್ಕಾರ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಯೋಜಿಸಿದ ವ್ಯಕ್ತಿತ್ವ ವಿಕಾಸನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಭಾಷಣ ಕಲೆ, ಚುಟುಕು, ಹನಿಗವನ, ಕವನ ರಚನೆ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ರಾ. ಸೇ. ಯೋ. ಘಟಕದ ಯೋಜನಾಧಿಕಾರಿ ಅಬ್ದುಲ್ ಮಜೀದ್ ಎಸ್ ವಹಿಸಿದ್ದರು. ವಿದ್ಯಾರ್ಥಿಗಳಾದ ರಮೀಝ, ಶೈಮಾ, ಸುಝನಾ, ರಂಝಿನಾ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಸಹ ಯೋಜನಾಧಿಕಾರಿ ಸಂಶುನ್ನಿಸ, ಉಪನ್ಯಾಸಕರಾದ ಮೊಹಮ್ಮದ್ ಶಿಹಾಬ್, ವತ್ಸಲಾ, ಹರ್ಷ, ಗ್ರಂಥಪಾಲಕರಾದ ಸುಹೈಲ, ರಾ. ಸೇ. ಯೋ. ಘಟಕ ನಾಯಕಿಯರಾದ ಆಯಿಷಾ ನೈಫಾ, ಫಾತಿಮಾ ಜಝಿರಾ ಉಪಸ್ಥಿತರಿದ್ದರು.ನುಸೈಬ ಸ್ವಾಗತಿಸಿ, ಶೈಮಾ ವಂದಿಸಿದರು ಫಾತಿಮಾ ಅನ್ಸಿರಾ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಮೆಲ್ಕಾರ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ"