ದೇಹದ ಮಾಂಸಖಂಡ ಕ್ಷೀಣಿಸುವ ಸಮಸ್ಯೆ ಇದ್ದರೂ ಛಲದಿಂದ B.Comನಲ್ಲಿ 9ನೇ RANK ಗಳಿಸಿದ್ದ ಸಾಧಕ ಆದಿತ್ಯ ನಿಧನ

ಬಂಟ್ವಾಳ: ಕಳೆದ ಬಾರಿ ಮಂಗಳೂರು ವಿವಿ ಬಿಕಾಂ ಪರೀಕ್ಷೆಯಲ್ಲಿ 9ನೇ RANK ಪಡೆದಿದ್ದ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ವಿದ್ಯಾರ್ಥಿ, ದೇಹದ ಮಾಂಸಖಂಡಗಳು ಕ್ಷೀಣಿಸುವ ಸಮಸ್ಯೆ ಇದ್ದರೂ ಛಲದಿಂದ ಪರೀಕ್ಷೆ ಬರೆದಿದ್ದ ಕಲ್ಲಡ್ಕ ಸಮೀಪ ಮಾಣಿ ಸನಿಹದ ಸೂರಿಕುಮೇರು ಬಳಿಯ ಕೃಷಿಕ ಗಣೇಶ್ ಭಟ್ ಉಷಾ ದಂಪತಿಯ ಮೊದಲ ಪುತ್ರ ಆದಿತ್ಯ (21) ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ (ಜೂನ್ 21)ರಂದು ನಿಧನ ಹೊಂದಿದರು.

ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ೨೦೨೧ನೇ ಸಾಲಿನ ಅಂತಿಮ ಬಿ.ಕಾಂ ಪದವಿಯಲ್ಲಿ ಶೇ.೯೩.೮ ಅಂಕ ಗಳಿಸಿದ್ದು, RANK ಗಳಿಸಿದ್ದ ಪ್ರತಿಭಾವಂತ ಆದಿತ್ಯ, ಹುಟ್ಟಿನಿಂದ ಮಾಂಸಖಂಡಗಳ ಬಲಹೀನತೆಯ ಸ್ಥಿತಿಯೊಂದಿಗೆ ಇನ್ನೊಬ್ಬರನ್ನು ಅವಲಂಬಿಸಿಯೇ ತನ್ನ ನಿತ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರೂ, ಪ್ರತಿಭಾಶಾಲಿಯಾಗಿ ಉತ್ತಮ ಅಂಕ ಗಳಿಸಿರುವುದು ಇತರ ಯುವಕರಿಗೆ ಮಾದರಿಯಾಗಿದ್ದರು.

ಆದಿತ್ಯನಿಗೆ ಸನ್ಮಾನ ನಡೆದ ಕ್ಷಣಗಳು

ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಮಾಣಿ ಬಾಲವಿಕಾಸ ಶಾಲೆಯಲ್ಲಿ ಮಾಡಿದ ಬಳಿಕ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡು, ಪದವಿಯಲ್ಲಿ ಬಿ.ಕಾಂ ಓದಿದ ಆದಿತ್ಯ, ಅಕೌಂಟೆನ್ಸಿಯಲ್ಲಿ ಆರು ಸೆಮಿಸ್ಟರ್ ಗಳಲ್ಲಿ ಶೇ.೧೦೦ ಅಂಕ ಗಳಿಸಿದ್ದರು.  ಉಸಿರಾಟದ ಸಮಸ್ಯೆಯಿಂದ ವಾಪಸಾಗಿದ್ದು, ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ನಿಧನ ಹೊಂದಿದ್ದಾರೆ.

ಜಾಹೀರಾತು
ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ದೇಹದ ಮಾಂಸಖಂಡ ಕ್ಷೀಣಿಸುವ ಸಮಸ್ಯೆ ಇದ್ದರೂ ಛಲದಿಂದ B.Comನಲ್ಲಿ 9ನೇ RANK ಗಳಿಸಿದ್ದ ಸಾಧಕ ಆದಿತ್ಯ ನಿಧನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*