
ಅಮರನಾಥ ಯಾತ್ರೆಗೆ ತೆರಳಿದ್ದ ಬಂಟ್ವಾಳದ ಯಾತ್ರಿಗಳು ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ. ಬಂಟ್ವಾಳ, ಬಿ.ಸಿ.ರೋಡ್, ರಾಯಿ, ಸರಪಾಡಿಯ ಒಟ್ಟು 27 ಮಂದಿಯ ತಂಡ ಮಂಗಳೂರಿನಿಂದ ರೈಲಿನಲ್ಲಿ ದೆಹಲಿಗೆ ತೆರಳಿ ಅಲ್ಲಿಂದ ಅಮರನಾಥ ಯಾತ್ರೆ ಕೈಗೊಂಡಿತ್ತು. ಕೆಲ ದಿನಗಳ ಹಿಂದೆ ಅಮರನಾಥದಲ್ಲಿ ನಡೆದ ಮೇಘಸ್ಫೋಟ ಸಂದರ್ಭ, ಪ್ರಯಾಣದಲ್ಲಿದ್ದ ಅವರು ಬಳಿಕ ಸುರಕ್ಷಿತವಾಗಿ ಆರ್ಮಿಯ ಸಹಾಯದಿಂದ ಅಮರನಾಥ ದರ್ಶನ ಮಾಡಿ ಮಂಗಳೂರಿಗೆ ಮರಳಿದ್ದು, ಸೋಮವಾರ ಬಿ.ಸಿ.ರೋಡ್ ತಲುಪಿದರು. ಸುರೇಶ್ ಕೋಟ್ಯಾನ್, ತಿಲಕ್ ರಾಜ್, ಯಶೋಧರ ಕರ್ಬೆಟ್ಟು, ಸಂತೋಷ್ ರಾಯಿಬೆಟ್ಟು ಸಹಿತ ಹಲವರು ಈ ತಂಡದಲ್ಲಿದ್ದು, ತಮ್ಮ ಯಾತ್ರೆಯುದ್ದಕ್ಕೂ ಸೈನಿಕರು ನೀಡಿದ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

Be the first to comment on "ಅಮರನಾಥಕ್ಕೆ ತೆರಳಿದ್ದ ಬಂಟ್ವಾಳದ ಯಾತ್ರಿಗಳು ಸುರಕ್ಷಿತವಾಗಿ ವಾಪಸ್"