ಬುಧವಾರ ಸುರಿಯುತ್ತಿರುವ ಭಾರಿ ಮಳೆಗೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆಯಲ್ಲಿ ಗುಡ್ಡ ಜರಿದು ಕುಡ್ತಮುಗೇರು ಕುಳಾಲು ರಸ್ತೆಯ ಸಂಪರ್ಕಕ್ಕೆ ಅಡಚಣೆ ಉಂಟಾಗಿದೆ. ಗ್ರಾಮದ ಹಲವೆಡೆ ಮಳೆಯಿಂದ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ಬೊಲ್ಪಾದೆ ನವಗ್ರಾಮದ ಬಡ ಮಹಿಳೆ ಸುಶೀಲಾ ಶೆಟ್ಟಿಯವರ ಮನೆ ಮೇಲೆ ಕಳೆಂಜಿಮಲೆ ರಕ್ಷಿತಾರಣ್ಯದ ಮರ ಮುರಿದು ಬಿದ್ದಿದೆ. ಕೊಳ್ನಾಡು ಗ್ರಾಮದ ಸೆರ್ಕಳ ಸಂಕಪ್ಪ ಸಫಲ್ಯರ ಮನೆ ಮೇಲೆ ಮರ ಉರುಳಿಬಿದ್ದಿದೆ. ಟೀವಿ ನೋಡುತ್ತಿದ್ದ ಸಂದರ್ಭ ಮನೆ ಮೇಲೆ ಉರುಳಿದ ಭಾರೀ ಗಾತ್ರದ ಅತ್ತಿಮರ ಉರುಳಿಬಿತ್ತು ಎಂದು ಸಂಕಪ್ಪ ಸಪಲ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಕೊಳ್ನಾಡು ಗ್ರಾಮಕರಣಿಕ ಮಂಜುನಾಥ, ಪಿಡಿಒ ಭೇಟಿ, ಪರಿಶೀಲನೆ ನಡೆಸಿದರು. NEWS UPDATES BY www.bantwalnews.com EDITOR: HARISH MAMBADY



ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಮಳೆಯಿಂದ ಕುಡ್ತಮುಗೇರು ಕುಳಾಲು ರಸ್ತೆಯಲ್ಲಿ ಗುಡ್ಡ ಜರಿತ"