ಬಂಟ್ವಾಳ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಕ್ತ ಕೊಠಡಿ, ಕಂಪ್ಯೂಟರ್ ಹಾಗೂ ಮೂಲಭೂತ ಸೌಲಭ್ಯ ಒದಗಿಸಲು ಅವಕಾಶ ಕಲ್ಪಿಸಿ ಸರಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿ ಆದೇಶ ಮಾಡಿದ ಸಂಬಂಧ, ಬಂಟ್ವಾಳ ತಾಲೂಕಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ 59 ಗ್ರಾಮಗಳನ್ನು ಒಳಗೊಂಡ 35 ಗ್ರಾಮಕರಣಿಕರ ಕಚೇರಿಗಳಿಗೆ ಕಂಪ್ಯೂಟರ್, ಪ್ರಿಂಟರ್, ಹಾಗೂ ಪೀಠೋಪಕರಣ ಸೌಲಭ್ಯಕ್ಕಾಗಿ ಅನುದಾನ ಒದಗಿಸುವ ಬಗ್ಗೆ ಬಂಟ್ವಾಳ ಗ್ರಾಮಲೆಕ್ಕಾಧಿಕಾರಿಗಳ ಸಂಘದಿಂದ ಶಾಸಕರಿಗೆ ಸೋಮವಾರ ಬಿ.ಸಿ ರೋಡ್ ಸಾಮರ್ಥ್ಯ ಸೌಧದಲ್ಲಿ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ತಾಲೂಕಿನಲ್ಲಿ ಕಂದಾಯ ಇಲಾಖೆಯ ಮುಖಾಂತರ ಇತ್ತೀಚೆಗೆ ನೀಡಲಾದ 94ಸಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಗ್ರಾಮಲೆಕ್ಕಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ 35 ಗ್ರಾಮಕರಣಿಕರ ಕಚೇರಿಗಳಿಗೆ ಕಂಪ್ಯೂಟರ್, ಪ್ರಿಂಟರ್ ಹಾಗೂ ಪೀಠೋಪಕರಣ ಸೌಲಭ್ಯಕ್ಕಾಗಿ ಆದಷ್ಟು ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು ಎಂಬ ಸ್ಪಷ್ಟ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷರಾದ ಅನಿಲ್ ಕೆ ಪೂಜಾರಿ, ಗೌರವಾಧ್ಯಕ್ಷರಾದ ಕುಮಾರ್ ಟಿ ಸಿ, ಉಪಾಧ್ಯಕ್ಷ ಕರಿಬಸಪ್ಪ ಜಿ ನಾಯಕ್, ಖಜಾಂಚಿ ವೈಶಾಲಿ, ಕಾರ್ಯದರ್ಶಿ ರಾಜು ಲಮಾಣಿ ಹಾಗೂ ಪದಾಧಿಕಾರಿಗಳಾದ ಪ್ರಕಾಶ್ ಪಿ, ಪ್ರಶಾಂತ್, ಮತ್ತಿಹಳ್ಳಿ ಪ್ರಕಾಶ್, , ಆಶಾ ಮೆಹಂದಳೆ, ಅಶ್ವಿನಿ ಉಪಸ್ಥಿತರಿದ್ದರು
Be the first to comment on "ಗ್ರಾಮಕರಣಿಕರ ಕಚೇರಿಗೆ ಕಂಪ್ಯೂಟರ್,ಪ್ರಿಂಟರ್ ಹಾಗೂ ಪೀಠೋಪಕರಣ ಸೌಲಭ್ಯ ಒದಗಿಸಲು ಗ್ರಾಮಲೆಕ್ಕಾಧಿಕಾರಿಗಳ ಸಂಘದಿಂದ ಶಾಸಕರಿಗೆ ಮನವಿ ಸಲ್ಲಿಕೆ"