ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಭಾನುವಾರ ಸಂಜೆ ಈಜಲು ಹೋದ ಯುವಕನೋರ್ವ ನೀರುಪಾಲಾಗಿದ್ದು, ಆತನಿಗಾಗಿ ಸೋಮವಾರವೂ ಶೋದಕಾರ್ಯ ನಡೆಯಿತು. ರಾತ್ರಿವರೆಗೂ ನೀರುಪಾಲಾದ ಅಶ್ವಿತ್ (19) ಪತ್ತೆಯಾಗಿಲ್ಲ.
ಶಾಸಕ ಯು.ಟಿ.ಖಾದರ್ ಸ್ಥಳಕ್ಕೆ ಭೇಟಿ ನೀಡಿ ಶೋಧಕಾರ್ಯದ ಕುರಿತು ನಿರ್ದೇಶನಗಳನ್ನು ನೀಡಿದರು. ಈ ವೇಳೆ ಪ್ರವೀಣ್ ಆಳ್ವ, ರಝಾಕ್ ಕುಕ್ಕಾಜೆ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಪೊಲೀಸ್, ಅಗ್ನಿಶಾಮಕದಳ ಸ್ಥಳೀಯರ ಸಹಾಯದಿಂದ ಹುಡುಕಾಟ ನಡೆಸುತ್ತಿದೆ.
ಘಟನೆ ವಿವರ: ಸಜಿಪನಡುವಿನ ತಲೆಮೊಗರುವಿನ ನಾಗೇಶ್ ಗಾಣಿಗ ಎಂಬವರ ಮನೆಯಲ್ಲಿ ಮಗುವನ್ನ ತೊಟ್ಟಿಲು ತೂಗುವ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಶ್ವಿತ್, ಗೆಳೆಯರೊಂದಿಗೆ ಸಮೀಪದ ನೇತ್ರಾವತಿ ನದಿಗೆ ನೀರಾಟವಾಡಲು ತೆರಳಿದ್ದಾರೆ.ಈ ವೇಳೆ ಅಶ್ವಿತ್ ಮತ್ತು ಹರ್ಷ ನೀರುಪಾಲಾಗಿದ್ದಾರೆ. ಹರ್ಷ ನನ್ನು ಸ್ಥಳೀಯರು ರಕ್ಷಿಸಿದ್ದಾರೆ
Be the first to comment on "ನೀರುಪಾಲಾದ ಯುವಕನಿಗೆ ಮುಂದುವರಿದ ಶೋಧ ಕಾರ್ಯ"