ಬಂಟ್ವಾಳ: ಬಗರ್ ಹುಕುಂ, ಭೂಮಸೂದೆ ಸಹಿತ ಭೂಮಿ ಇಲ್ಲದವನಿಗೆ ಜಮೀನು ನೀಡುವ ಕಾಂಗ್ರೆಸ್ ಸರ್ಕಾರ ನೀಡಿದ್ದ ಸಾಧನೆಗಳನ್ನು ಸ್ಮರಿಸಿ, ಹಿಂದುಳಿದ ವರ್ಗದವರೆಲ್ಲ ಒಟ್ಟಾದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ.
ಬಿಸಿರೋಡು ಶ್ರೀ ಬ್ರಹ್ಮನಾರಾಯಣ ಗುರು ಸಭಾ ಭವನದಲ್ಲಿ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಗಳ ಹಿಂದುಳಿದ ವರ್ಗಗಳ ಘಟಕ ವತಿಯಿಂದ ಹಿಂದುಳಿದ ವರ್ಗಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಜನತಾ ಪಾರ್ಟಿ ಬ್ಯುಸಿನೆಸ್ ಜನತೆಯ ಪಾರ್ಟಿಯಾಗಿದ್ದು, ಭಯೋತ್ಪಾದನಾ ಪಾರ್ಟಿಯಾಗಿದೆ ಎಂದು ಆರೋಪಿಸಿದ ಅವರು, ತಮ್ಮ ತಂದೆಯವರು ಅದಕ್ಕಾಗಿಯೇ ಸೇರಿದ ಒಂಭತ್ತು ತಿಂಗಳಲ್ಲಿ ಪಾರ್ಟಿ ಬಿಟ್ಟಿದ್ದರು ಎಂದರು. ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ ಅರಣ್ಯ ಜಮೀನಲ್ಲಿ ಕೃಷಿ ಮಾಡುವವರಿಗೆ ನೀವು ಕಳ್ಳರು ಎಂಬ ನೋಟಿಸ್ ಜಾರಿ ಮಾಡಲಾಗಿದ್ದನ್ನು ನೆನಪಿಸಿಕೊಳ್ಳಬೇಕು ಎಂದರು.
ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸ್ ದಾಸ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಬಿ.ರಮಾನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಬಿಜೆಪಿ ಧರ್ಮ ದೇವರ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ, ಭಾವನಾತ್ಮಕ ವಿಚಾರದ ಮೂಲಕ ಮನುಷ್ಯ ಮನುಷ್ಯರ ನಡುವೆ ಧ್ವೇಷ ಉಂಟಾಗಿಸುತ್ತಿದೆ ಎಂದರು. ವಿವಿಧ ಸವಲತ್ತುಗಳನ್ನು ನೀಡಿದ ಕಾಂಗ್ರೇಸ್ ಪಕ್ಷದ ಋಣ ನಮ್ಮ ಮೇಲಿದ್ದು, ತೀರಿಸುವ ಕೆಲಸ ಆಗಬೇಕಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ , ಮಾಜಿ ಸದಸ್ಯ ಪೃಥ್ವಿರಾಜ್ ಅರ್.ಕೆ. ಹಿಂದುಳಿದ ವರ್ಗಗಳ ರಾಜ್ಯ ಸಮಿತಿ ಸದಸ್ಯ ಗಣೇಶ್ ಪೂಜಾರಿ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿ.ಸೋಜ, ಜಿ.ಪಂ. ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಪಕ್ಷ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಿಯೂಸ್ ಎಲ್ ರೋಡ್ರಿಗಸ್, ಮಾಯಿಲಪ್ಪ ಸಾಲ್ಯಾನ್, ಸುರೇಶ್ ಜೋರ, ಇಬ್ರಾಹಿಂ ನವಾಜ್ ಬಡಕಬೈಲ್, ಸುದರ್ಶನ್ ಜೈನ್, ಸುಭಾಶ್ಚಂದ್ರ ಶೆಟ್ಟಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಅಬ್ಬಾಸ್ ಆಲಿ ಬೋಳಂತೂರು, ಪದ್ಮನಾಭ ರೈ, ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ, ಮಲ್ಲಿಕಾ ಪಕ್ಕಳ, ಜಯಂತಿ ಪೂಜಾರಿ, ನಾರಾಯಣ ನಾಯ್ಕ್, ಹಿಂದುಳಿದ ವರ್ಗಗಳ ಬಂಟ್ವಾಳ ಬ್ಲಾಕ್ ಘಟಕದ ಅಧ್ಯಕ್ಷ ತಿಮ್ಮಪ್ಪ ಪೂಜಾರಿ, ಹಿಂದುಳಿದ ವರ್ಗಗಳ ಪಾಣೆಮಂಗಳೂರು ಬ್ಲಾಕ್ ಘಟಕದ ಅಧ್ಯಕ್ಷ ರಮೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ, ಜಗದೀಶ ಕೊಯ್ಲ ವಂದಿಸಿದರು. ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಹಿಂದಿನ ಕೊಡುಗೆ ಸ್ಮರಿಸಿ, ಮುಂದಿನ ಚುನಾವಣೆ ಗೆಲ್ಲಿಸಿ: ಮಧು ಬಂಗಾರಪ್ಪ"