ಬಂಟ್ವಾಳ: ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ.ಮೂಡ ಗ್ರಾಮದ ಬಿ.ಸಿ.ರೋಡ್ ಫ್ಲೈಓವರ್ ಮೇಲ್ಭಾಗದಲ್ಲಿ ಮತ್ತು ಅದರ ಕೆಳಭಾಗದಲ್ಲಿ ಸಾರ್ವಜನಿಕರು ಯಾವುದೇ ಭಿತ್ತಿಪತ್ರ ಅಂಟಿಸುವುದು, ಫ್ಲೆಕ್ಸ್, ಬ್ಯಾನರ್ ಅಳವಡಿಸುವುದನ್ನು ಪುರಸಭೆ ನಿಷೇಧಿಸಿದ್ದು, ಅಂಥದ್ದೇನಾದರೂ ಕಂಡುಬಂದಲ್ಲಿ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರಕಟಣೆಯೊಂದನ್ನು ಪುರಸಭೆ ಹೊರಡಿಸಿದ್ದು, ಫ್ಲೈಓವರ್ ಮೇಲ್ಭಾಗ ಅಥವ ಕೆಳಭಾಗದಲ್ಲಿ ಭಿತ್ತಿಪತ್ರ, ಬ್ಯಾನರ್, ಫ್ಲೆಕ್ಸ್ ಅಳವಡಿಸುವುದು, ಸಾರ್ವಜನಿಕರಿಗೆ, ಪಾದಚಾರಿಗಳಿಗೆ ತೊಂದರೆ ಆಗುವ ರೀತಿಯಲ್ಲಿ ಟೆಂಟ್ ಅಳವಡಿಸುವುದು, ನಗರವನ್ನು ವಿರೂಪಗೊಳಿಸುತ್ತಿರುವುದು ಬಂಟ್ವಾಳ ಪುರಸಭೆ ಗಮನಕ್ಕೆ ಬಂದಿದೆ. ಆದ್ದರಿಂದ ಇನ್ನು ಮುಂದಕ್ಕೆ ಸಾರ್ವಜನಿಕರು ಎಚ್ಚೆತ್ತುಕೊಂಡು ಫ್ಲೈಓವರ್ ಸುತ್ತಮುತ್ತ ಶುಚಿತ್ವದಲ್ಲಿಡುವಂತೆ ತಿಳಿಸಲಾಗಿದೆ. ತಪ್ಪಿದಲ್ಲಿ ಅಂಥವರಿಗೆ ಪುರಸಭೆ ಸ್ವತ್ತಿಗೆ ಹಾನಿ ಮಾಡಿರುವ ಬಗ್ಗೆ ಪುರಸಭಾ ಕಾಯ್ದೆ 1964 ಪ್ರಕರಣ 280ರಡಿ ದಂಡನೆ ವಿಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ಮುಖ್ಯಾಧಿಕಾರಿ ಸ್ವಾಮಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
Be the first to comment on "ಫ್ಲೈಓವರ್ ನಲ್ಲಿ ಫ್ಲೆಕ್ಸ್, ಬ್ಯಾನರ್: ನಿಷೇಧ ವಿಧಿಸಿದ ಪುರಸಭೆ, ದಂಡ ವಿಧಿಸುವ ಎಚ್ಚರಿಕೆ"