




ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಅಗಸ್ಟ್ 5ರವರೆಗೆ ನಡೆಯಲಿರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ, ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಹಿನ್ನೆಲೆಯಲ್ಲಿ ಪ್ರಾರಂಭಗೊಂಡಿದ್ದು, ಭಾನುವಾರ ಕನಕಧಾರಾ ಯಾಗ ನಡೆಯಿತು. ಮಕ್ಕಳಿಗೆ ಸಂಸ್ಕಾರ ನೀಡುವ ನಿಲ್ಲಿನಲ್ಲಿ 48ದಿನಗಳ ಕಾಲ ನಡೆಯುವ ಬಾಲ ಭೋಜನದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಈ ಸಂದರ್ಭ ಶ್ರೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.ಚಿದಾನಂದ ಗುರೂಜಿ ಸಾನಿಧ್ಯ ವಹಿಸಿದ್ದರು. ಉದ್ಯಮಿ ಭಾಸ್ಕರ ಶೆಟ್ಟಿ, ಸೂರ್ಯ ನಾರಾಯಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ. ದಾಮೋದರ, ಅಳಿಕೆ ಕೃಷ್ಣ, ಮಲ್ಲಿಕಾ, ಮನೀಶ್, ಮಹಿಳಾ ಸಮಿತಿಯ ವನಿತಾ ವಿ. ಶೆಟ್ಟಿ ಉಪಸ್ಥಿತರಿದ್ದರು. ಟ್ರಸ್ಟಿ ತಾರನಾಥ ಕೊಟ್ಟಾರಿ ಸ್ವಾಗತಿಸಿದರು. ಟ್ರಸ್ಟಿ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮಕ್ಕಳಿಗೆ ಬಾಲಭೋಜನ ಸಂಪ್ರದಾಯ ಆರಂಭಿಸಲಾಯಿತು. ಸಾಮೂಹಿಕ ಕುಂಕುಮಾರ್ಚನೆ,ಕನಕಧಾರ ಯಾಗ ಪೂರ್ಣಾಹುತಿ ನಡೆಯಿತು.

Be the first to comment on "ಮಾಣಿಲ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಗೆ ಚಾಲನೆ"