

ಬಂಟ್ವಾಳ: ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ಇದರ ಮಾಣಿ ವಲಯ ಕಚೇರಿ ಉದ್ಘಾಟನಾ ಸಮಾರಂಭ ಕುಂಭಶ್ರೀ ಸಹಕಾರಿ ಭವನ ದ 1 ನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತು. ಬೀಡಿ ಗುತ್ತಿಗೆದಾರ ಶೇಖರ್ ಕುಲಾಲ್ ಕಲ್ಲಾಜೆಪಲಿಕೆ ಉದ್ಘಾಟಿಸಿದರು. ದ.ಕ ಜಿಲ್ಲಾ ಕಟ್ಟಡ ಮತ್ತು ಕೋರೆ ಕಾರ್ಮಿಕರ ಸಂಘದ ಮಾಣಿ ವಲಯ ಘಟಕದ ಕಾರ್ಮಿಕ ಸೇವಾ ಕಚೇರಿ ಕೂಡಾ ಈ ಕಚೇರಿಯಲ್ಲೇ ನಡೆಯಲಿದೆ. ಕುಶಾಲಪ್ಪ ಗೌಡ ಪೆರಾಜೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ ಎಸ್ ಬೇರಿಂಜ, ಉಪಾಧ್ಯಕ್ಷ ಬಿ.ಶೇಖರ್, ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್, ಎಐಟಿಯುಸಿ ಜಿಲ್ಲಾ ಮುಖಂಡ ಎಂ.ಕರುಣಾಕರ್ ಮಾರಿಪಳ್ಳ ಉಪಸ್ಥಿತರಿದ್ದರು.
Be the first to comment on "ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ ವಲಯ ಕಚೇರಿ ಉದ್ಘಾಟನೆ"