ಪುಂಜಾಲಕಟ್ಟೆ: ಮಂಗಳೂರು ಸಹಾಯಕ ಕಮೀಷನರ್ ಮದನ್ ಮೋಹನ್ ಅವರು ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ರಶ್ಮಿ ಎಸ್.ಆರ್ , ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ಧಲಿಂಗ, ಐ.ಟಿ.ಡಿ.ಪಿ.ಪ್ರಾಜೆಕ್ಟ್ ಡೈರೆಕ್ಟರ್ ಗಾಯತ್ರಿ ಮತ್ತು ಅವರ ತಂಡದೊಂದಿಗೆ ಪುಂಜಾಲಕಟ್ಟೆಯಲ್ಲಿ 29 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆಯ ಸ್ಥಳ ವೀಕ್ಷಣೆಯನ್ನು ನಡೆಸಿದರು.
ಈ ಶೈಕ್ಷಣಿಕ ವರ್ಷದಿಂದ ಪುಂಜಾಲಕಟ್ಟೆಯ ಖಾಸಗಿ ಕಟ್ಟಡದಲ್ಲಿ ಆರಂಭಗೊಳ್ಳಲಿರುವ ವಸತಿ ಶಾಲೆ ಸ್ವಂತ ಜಾಗದಲ್ಲಿ ನಿರ್ಮಾಣಗೊಳ್ಳಲಿದೆ.
ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ, ಸದಸ್ಯ ಕಾಂತಪ್ಪ ಪೂಜಾರಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಕರಣೀಕ ರಾಜು, ಗ್ರಾಮ ಸಹಾಯಕ ಸಂತೋಷ್, ಪಂಚಾಯತ್ ಕಾರ್ಯದರ್ಶಿ ಬಾಲಕೃಷ್ಣ, ಪ್ರಾಂಶುಪಾಲ ಸಂತೋಷ್, ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಮಂಗಳೂರು ಸಹಾಯಕ ಕಮೀಷನರ್ ಅವರಿಂದ ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆ ನಿರ್ಮಾಣ ಸ್ಥಳ ವೀಕ್ಷಣೆ"