ಬಂಟ್ವಾಳ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಕಟ್ಟೆಮಾರ್ ಶ್ರೀ ಮಂತ್ರದೇವತೆ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಸೋಮವಾರ ಕಟ್ಟೆಮಾರ್ ಕ್ಷೇತ್ರದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಆಗಮಿಸಿ ಶುಭ ಹಾರೈಸಿದರು. ಧರ್ಮದರ್ಶಿ ಮನೋಜ್ ಕಟ್ಟೆಮಾರ್, ರಾಜಕೇಸರಿಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ, ನಟ ರಾಜೇಶ್ ಕಣ್ಣೂರು, ಕಲಾವಿದ ಪ್ರಜ್ವಲ್ ಗುರುವಾಯನಕೆರೆ ಸಹಿತ ಸಾಧಕರನ್ನು ಸನ್ಮಾನಿಸಲಾಯಿತು. ಹಲವಾರು ಮಂದಿ ರಕ್ತದಾನ ಮಾಡಿದರು. ಮನೋಜ್ ಕಟ್ಟೆಮಾರ್ ಅವರಿಗೆ ತುಳುನಾಡ ಐಸಿರಿ, ದೀಪಕ್ ಬೆಳ್ತಂಗಡಿ ಅವರಿಗೆ ಸೇವಾ ದೀಪ ಬಿರುದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಟ್ಟೆಮಾರ್‍ದ್ ಶಕ್ತಿ ಆಲ್ಬಂ ಸಾಂಗ್ ಬಿಡುಗಡೆಗೊಳಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಧರ್ಮದರ್ಶಿ ಮನೋಜ್ ಕಟ್ಟೆಮಾರ್ ಅವರು, ರಾಜಕೇಸರಿ ಸಂಘಟನೆಯ ಸೇವಾ ಕಾರ್ಯಗಳ ಪ್ರೇರಣೆಯ ಫಲವಾಗಿ ಕಟ್ಟೆಮಾರ್ ಕ್ಷೇತ್ರದಲ್ಲಿ ರಕ್ತದಾನದಂತಹ ಪುಣ್ಯ ಕಾರ್ಯವನ್ನು ನಡೆಸುವುದಕ್ಕೆ ಸಾಧ್ಯವಾಗಿದೆ ಎಂದರು. ಮಾಹಾಮಾಯೆ ಪಾತ್ರಿ ಸುಂದರ ದರ್ಖಾಸು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಟ-ನೃತ್ಯ ನಿರ್ದೇಶಕ ರಾಜೇಶ್ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ವೆನ್‌ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ವ್ಯವಸ್ಥಾಪಕ ಅಂತೋನಿ ಅವರು ರಕ್ತದಾನದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಪ್ರಜ್ವಲ್‌ಕುಮಾರ್, ಬಂಟ್ವಾಳ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ತಾರಾನಾಥ ಸಾಲ್ಯಾನ್, ಪತ್ರಕರ್ತ ಹರೀಶ ಮಾಂಬಾಡಿ, ಬಿಜೆಪಿ ಮುಂದಾಳು ಪ್ರಭಾಕರ ಶೆಟ್ಟಿ ಬದರಡ್ಕ, ಬ್ಲಡ್‌ಬ್ಯಾಂಕ್ ವೈದ್ಯೆ ಡಾ| ವಿಜಯಶ್ರೀ, ರಾಜಕೇಸರಿಯ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಗುರುಪ್ರಸಾದ್, ಬೆಳ್ತಂಗಡಿ ಘಟಕದ ಅಧ್ಯಕ್ಷ ನಾಗೇಶ್ ಬಿ, ಗುತ್ತಿಗೆದಾರರಾದ ನವೀನ್‌ಪೂಜಾರಿ ಕಾರಾಜೆ, ನಾಗೇಶ್ ಕುಲಾಲ್, ಬಜರಂಗ ದಳದ ಮುಂದಾಳು ಕೌಶಿಲ್ ಶೆಟ್ಟಿ ಬಾಳಿಕೆ, ಉದ್ಯಮಿಗಳಾದ ಪ್ರತಾಪ್ ಶೇಡಿಗುರಿ, ಕೆ.ಶೈಲೇಶ್ ಪೂಜಾರಿ, ರವೀಂದ್ರ ಪೂಜಾರಿ ಬದನಡಿ ಮೊದಲಾದವರು ಉಪಸ್ಥಿತರಿದ್ದರು. ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ.ಬೆಳ್ತಂಗಡಿ ಸ್ವಾಗತಿಸಿದರು.
Be the first to comment on "ಕಟ್ಟೆಮಾರ್ ನಲ್ಲಿ ರಕ್ತದಾನ ಶಿಬಿರ, ಸನ್ಮಾನ"