
FOR ADVERTISEMENTS PLEASE CONTACT: HARISH MAMBADY, 9448548127




ಬಂಟ್ವಾಳ: ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲು ನಿವೃತ್ತಿ ಎಂಬುದು ಇಲ್ಲ. ಸಮಾಜದ ಹಿತಕ್ಕಾಗಿ ರಾಷ್ಟ್ರದ ಒಳಿತಿಗಾಗಿ ಮಾಡುವ ಕಾರ್ಯಗಳನ್ನು ನಿರಂತರವಾಗಿ ಮುಂದುವರೆಸಿದಾಗ ಜೀವನ ಸಾರ್ಥಕವಾಗುವುದು ಎಂದು ಮಾಜಿ ಶಾಸಕ ಬಾಲಕೃಷ್ಣ ಭಟ್ ಹೇಳಿದರು.
ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಬಂಟ್ವಾಳ ತಾಲೂಕು ಘಟಕದ ಪದಗ್ರಹಣ ಮತ್ತು ಹಿರಿಯರ ಸಮಾವೇಶವನ್ನು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಕಶೆಕೋಡಿಯಲ್ಲಿ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು.
ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಕಲ್ಲೇಗ ಸಂಜೀವ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕೃಷಿಕರಾದ ನಾರಾಯಣ ಪ್ರಭು ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ , ಕಾರ್ಯದರ್ಶಿಯಾಗಿ ಕಾನ ಈಶ್ವರ ಭಟ್ , ಪದಾಧಿಕಾರಿಗಳಾಗಿ ಡಾ.ವಿಶ್ವನಾಥ ನಾಯಕ್ ಪಾಣೆಮಂಗಳೂರು , ಕೆ. ಮೋಹನ್ ರಾವ್ , ಪ್ರೊ. ರಾಜಮಣಿ ರಾಮಕುಂಜ , ಪರಮೇಶ್ವರ ಮೂಲ್ಯ, ರಾಜಾರಾಮ ಐತಾಳ್, ವೆಂಕಟ್ರಮಣ ಭಟ್, ಕೃಷ್ಣ ಶರ್ಮ ಅಧಿಕಾರ ಸ್ವೀಕರಿಸಿದರು. ಕೈಯೂರು ನಾರಾಯಣ ಭಟ್ ಸ್ವಾಗತಿಸಿದರು. ಗೌರವಾಧ್ಯಕ್ಷ ಎ.ವಿ. ನಾರಾಯಣ ಪ್ರಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ವಂದಿಸಿದರರು. ಜಯಾನಂದ ಪೆರಾಜೆ ನಿರೂಪಿಸಿದರು.
Be the first to comment on "ಹಿರಿಯರ ಸೇವಾ ಪ್ರತಿಷ್ಠಾನ ಬಂಟ್ವಾಳ ತಾಲೂಕು ಘಟಕ ಪದಗ್ರಹಣ"