ರಸ್ತೆಯಲ್ಲಿ ಮಹಿಳೆಯರು ಕಾರಿನೊಳಗಿನಿಂದ ಬೊಬ್ಬೆ ಹೊಡೆಯುತ್ತಿರುವುದನ್ನು ಕಂಡು ಸ್ಥಳೀಯರು ಆತಂಕಿತರಾಗಿ ಸಾಲೆತ್ತೂರು ಸಮೀಪ ವಾಹನವನ್ನು ತಡೆದು ನಿಲ್ಲಿಸಿದರು.. ಮುಂದೇನಾಯಿತು?
ಪಾವೂರು ಎಂಬಲ್ಲಿಂದ ಮಹಿಳೆಯರನ್ನು ಪಣೋಲಿಬೈಲ್ ಕಡೆಗೆ ಕರೆದುಕೊಂಡು ಹೋಗುವ ಸಂದರ್ಭ ಕಾರು ಚಾಲಕ ನಡೆಸಿದ ಕೃತ್ಯವೊಂದು ಆತಂಕ ಸೃಷ್ಟಿಸಿದ ನಂತರ ಕಾರನ್ನು ಸ್ಥಳೀಯರು ಅಡ್ಡಹಾಕಿ ಚಾಲಕನನ್ನು ಪೊಲೀಸರಿಗೊಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪ ಭಾನುವಾರ ನಡೆಯಿತು. ಇಬ್ಬರು ಮಹಿಳೆಯರು ಇದ್ದ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಗಮ್ಯ ಸ್ಥಾನಕ್ಕೆ ತಲುಪುವ ಸಂದರ್ಭ ಸಿಕ್ಕಸಿಕ್ಕ ರಸ್ತೆಗಳಲ್ಲಿ ಚಲಿಸಿ, ವೇಗದ ಮಿತಿಯನ್ನು ಹೆಚ್ಚಿಸತೊಡಗಿದ. ಇದನ್ನು ಗಮನಿಸಿದ ಮಹಿಳೆಯರು ಪ್ರಶ್ನಿಸಿದರೂ ಚಾಲಕ ಕೇರ್ ಮಾಡದೇ ಇದ್ದಾಗ ಬಾಕ್ರಬೈಲ್ ಕಡೆ ಮಹಿಳೆಯರು ಕಾರು ಕಿಟಿಕಿಯಿಂದ ತಲೆ ಹೊರಹಾಕಿ ಬೊಬ್ಬೆ ಹಾಕಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕಾರು ಹೋಗುವ ಸಂಭವನೀಯ ಜಾಗಗಳಲ್ಲಿರುವ ಸ್ನೇಹಿತರಿಗೆ ಸುದ್ದಿ ಮುಟ್ಟಿಸಿದ್ದಾರೆ. ಯಾರೋ ಮಹಿಳೆಯರನ್ನು ಕಿಡ್ನ್ಯಾಪ್ ಮಾಡುತ್ತಿರಬಹುದು ಎಂಬ ಸಂಶಯದಿಂದ ಸ್ಥಳೀಯರು ಆಯಕಟ್ಟಿನ ಜಾಗಗಳಲ್ಲೆಲ್ಲ ನಿಂತಿದ್ದು, ಈ ಸಂದರ್ಭ ಸಾಲೆತ್ತೂರು ಸಮೀಪ ಕಾರು ಕಂಡುಬಂದಿದ್ದು ಅದನ್ನು ಅಡ್ಡ ಹಾಕಿದ್ದಾರೆ. ಮಹಿಳೆಯರು ಸಾರ್ವಜನಿಕರ ಸಹಾಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದರೆ, ಸಾರ್ವಜನಿಕರು ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಕಾರು ಚಾಲಕನನ್ನು ಒಪ್ಪಿಸಿದರು.
Be the first to comment on "ಕಿಡ್ನ್ಯಾಪ್ ಎಂದು ಭಾವಿಸಿ ಕಾರು ತಡೆದ ಸ್ಥಳೀಯರು…ನಡೆದದ್ದೇನು?"