ದ.ಕ.ಜಿಲ್ಲೆಯ ಹದಿನೇಳರ ಪೈಕಿ ಬಂಟ್ವಾಳ ತಾಲೂಕಿನ ಇಬ್ಬರು ಈ ಬಾರಿ ಪೂರ್ಣಾಂಕ ಗಳಿಸಿದ್ದಾರೆ. ಅವರ ಅಭಿಪ್ರಾಯ ಇಲ್ಲಿದೆ.
ಧನ್ಯಶ್ರೀಗೆ ಡಾಕ್ಟರ್ ಆಗುವಾಸೆ: ದಿನಕ್ಕೆ ಐದರಿಂದ ಆರು ತಾಸು ಓದುತ್ತಿದ್ದ ವಿಟಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಧನ್ಯಶ್ರೀ ಇದೀಗ ಪುತ್ತೂರು ವಿವೇಕಾನಂದ ಕಾಲೇಜಿಗೆ ಪಿಸಿಎಂಬಿ ಕಾಂಬಿನೇಶನ್ ನಲ್ಲಿ ಪಿಯುಸಿ ಸೇರಲಿದ್ದು, ಮುಂದೆ ವೈದ್ಯೆ ಆಗಬೇಕು ಎಂಬ ಮಹದಾಸೆ ಹೊತ್ತಿದ್ದಾಳೆ. ವಿಟ್ಲ ಭಗವತಿ ದೇವಸ್ಥಾನ ಬಳಿಯ ನಿವಾಸಿ ಧನ್ಯಶ್ರೀ ಶಾಲಾ ಕಲಿಕೆಯೊಂದಿಗೆ ಹಳೆಯ ಪ್ರಶ್ನೆಪತ್ರಿಕೆ, ಮಾಡೆಲ್ ಪ್ರಶ್ನೆಪತ್ರಿಕೆಗಳ ಅಧ್ಯಯನದ ಮೂಲಕ ಪೂರ್ಣಾಂಕ ಪಡೆಯಲು ಸಹಕಾರಿಯಾಯಿತು ಎಂದಳು. ತಂದೆ ರವಿಪ್ರಕಾಶ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ತಾಯಿ ಮಮತಾ ಅಧ್ಯಾಪಕಿಯಾಗಿದ್ದಾರೆ. ಅಕ್ಕ ಇಂಜಿನಿಯರಿಂಗ್ ಮಾಡುತ್ತಿದ್ದಾರೆ.
ಸುಜಯ್ ಗೆ ಇಂಜಿನಿಯರ್ ಆಗುವಾಸೆ: ಸಾಗರದ ನಿವಾಸಿ ಚಾರ್ಟೆಡ್ ಅಕೌಂಟೆಂಟ್ ಬದರೀಶ್ ಕೆ.ಎಂ ಮತ್ತು ವಕೀಲೆ ಹಾಗೂ ಟ್ಯಾಕ್ಸ್ ಕನ್ಸಲ್ಟೆಂಟ್ ಸವಿತಾ ಬಿ. ಅವರ ದ್ವಿತೀಯ ಪುತ್ರ ಸುಜಯ್ ಬಿ. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಹೈಸ್ಕೂಲ್ ನ ವಿದ್ಯಾರ್ಥಿಯಾಗಿದ್ದು, ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕ ಗಳಿಸಿದ್ದು, ಸದ್ಯ ಸಾಗರದಲ್ಲಿರುವ ಈತನಿಗೆ ಇಂಜಿನಿಯರ್ ಆಗುವ ಆಸೆ. ಹೀಗಾಗಿ ಪಿಸಿಎಂಸಿಯನ್ನೇ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಅಳಿಕೆಯ ಹಾಸ್ಟೆಲ್ ನಲ್ಲಿದ್ದುಕೊಂಡು ಓದಿದ್ದೆ, ದಿನಕ್ಕೆ ಮೂರುವರೆ ತಾಸು ನಿಗದಿಯಾದದ್ದು ಸಹಿತ ಓದಲು ಹಾಗೂ ವಿದ್ಯಾರ್ಜನೆಗೆ ಪೂರಕವಾದ ವಾತಾವರಣ ಅಳಿಕೆ ಸಂಸ್ಥೆಯಲ್ಲಿತ್ತು. ಹೀಗಾಗಿ ಪೂರ್ಣಾಂಕ ಗಳಿಸಲು ಇದು ಪೂರಕವಾಯಿತು ಎಂದು ಸುಜಯ್ ಹೇಳಿದರು. ಅಣ್ಣನೂ ಅಳಿಕೆಯಲ್ಲಿ ಕಲಿತು ಇದೀಗ ಸಿಎ ಮಾಡುತ್ತಿರುವುದಾಗಿ ಸುಜಯ್ ತಂದೆ ಬದರೀಶ್ ಹೇಳಿದರು.
Be the first to comment on "625/625…..ಮುಂದೇನು? ಸಾಧಕ ವಿದ್ಯಾರ್ಥಿಗಳು ಹೀಗೆ ಹೇಳುತ್ತಾರೆ.."