![](https://i0.wp.com/bantwalnews.com/wp-content/uploads/2022/05/WhatsApp-Image-2022-05-18-at-11.43.18-AM.jpeg?resize=777%2C583&ssl=1)
![](https://i0.wp.com/bantwalnews.com/wp-content/uploads/2022/05/WhatsApp-Image-2022-05-12-at-1.21.08-PM.jpeg?resize=723%2C1024&ssl=1)
![](https://i0.wp.com/bantwalnews.com/wp-content/uploads/2021/11/WhatsApp-Image-2021-11-14-at-17.57.29.jpeg?resize=629%2C1024&ssl=1)
ಬಂಟ್ವಾಳ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳನ್ನು ಕಳವು ಮಾಡುತ್ತಿದ್ದ ಆರೋಪದಲ್ಲಿ ಬಂಟ್ವಾಳ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಾದ ಸಿದ್ದಿಕ್ (27) ಅಕ್ಬರ್ (22) ಮತ್ತು ಸಮೀರ್ (23) ಬಂಧಿತರು.
ಬಂಟ್ವಾಳ ಕಸ್ಬಾ ಗ್ರಾಮದ ಮಣಿಹಳ್ಳದ ಮುಖೇಶ್ ಎಂಬವರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸುಮಾರು 1 ಲಕ್ಷ ರೂ ಮೌಲ್ಯದ ಬೈಕ್ ಕಳವಾಗಿದ್ದರೆ, ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ರೈಲ್ವೇ ಸ್ಟೇಷನ್ ಬಳಿ ನಿಲ್ಲಿಸಿದ್ದ ರೈಲ್ವೇ ಇಲಾಖೆಯ ಸಿಬ್ಬಂದಿಯವರಾದ ಅನೂಫ್ ಎಂಬವರ ಬೈಕ್ ಕಳವಾಗಿದ್ದು, ಈ ಎರಡೂ ಬೈಕುಗಳನ್ನು ಆರೋಪಿಗಳು ಕದ್ದಿದ್ದಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೃತ್ಯಕ್ಕೆ ಉಪಯೋಗಿಸಿದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಸಹಾಯಕ ಪೊಲೀಸ್ ಅಧೀಕ್ಷಕರು ಶಿವಾಂಸು ರಜಪೂತ್ ಮತ್ತು ಪೊಲೀಸ್ ನಿರೀಕ್ಷಕರಾದ ವಿವೇಕಾನಂದ ನಿರ್ದೇಶನದಂತೆ ಪಿಎಸ್ಐಗಳಾದ ಅವಿನಾಶ್ ಮತ್ತು ಕಲೈಮಾರ್ ನೇತೃತ್ವದಲ್ಲಿ ವಿಶೇಷ ತಂಡದ ಸಿಬ್ಬಂದಿ ನಾರಾಯಣ, ಇರ್ಷಾದ್ ಪಿ, ಗಣೇಶ್, ಮನೋಹರ, ಪ್ರವೀಣ್, ಮೋಹನ, ನಾಗರಾಜ್, ಹಾಗೂ ಗಣಕಯಂತ್ರ ವಿಭಾಗದ ಸಿಬ್ಬಂದಿ ಸಂಪತ್ ಮತ್ತು ದಿವಾಕರ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.
Be the first to comment on "ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳವು ಮಾಡುತ್ತಿದ್ದ ಪ್ರಕರಣ: ಮೂವರ ಬಂಧಿಸಿದ ಬಂಟ್ವಾಳ ಪೊಲೀಸರು"