FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ದಿನವಿಡೀ ಸುರಿಯತ್ತಿರುವ ಮಳೆಯಿಂದಾಗಿ ರಸ್ತೆ ಅಗಲಗೊಳಿಸುವ ಕಾಮಗಾರಿ ನಡೆಯುತ್ತಿರುವ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೆಲ್ಕಾರ್, ಕಲ್ಲಡ್ಕ ಭಾಗಗಳಲ್ಲಿ ಸಂಚಾರವಷ್ಟೇ ಅಲ್ಲ, ಸಮೀಪದ ಮನೆ, ಅಂಗಡಿ ಮುಂಗಟ್ಟುಗಳವರೂ ತೊಂದರೆ ಪಡುವಂತಾಗಿದೆ.
ಹೆದ್ದಾರಿ ಅಗಲಗೊಳ್ಳುವ ಪ್ರಕ್ರಿಯೆ ಸಂದರ್ಭ ರಸ್ತೆ ಹೊಂಡ ಮಾಡಲಾಗಿದ್ದು, ವಿವಿಧ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭ ಮಣ್ಣು ರಾಶಿಯಾಗಿ ರಸ್ತೆಯಲ್ಲೇ ಹರಿದು ಹೋಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಅಪಾಯದ ಪರಿಸ್ಥಿತಿ ಎದುರಿಸುವಂತಾಗಿದೆ. ಕಲ್ಲಡ್ಕದಿಂದ ವಿಟ್ಲ ಕಡೆಗೆ ಹೋಗುವ ಸಂದರ್ಭ ಮತ್ತು ಮೆಲ್ಕಾರ್ ನಿಂದ ಮುಡಿಪುವಿನ ಕಡೆಗೆ ತೆರಳುವ ಪ್ರದೇಶಗಳಲ್ಲಿ ವಾಹನ ಸವಾರರು ಪರದಾಟ ಅನುಭವಿಸುವಂತಾಯಿತು. ಈಗಲೇ ಈ ಪರಿಸ್ಥಿತಿಯಾಗಿದ್ದರೆ, ಹೆದ್ದಾರಿ ಪಕ್ಕ ಇರುವ ಕಟ್ಟಡಗಳು ಅಪಾಯದ ಸ್ಥಿತಿ ಎದುರಿಸುತ್ತಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತ ಸಜ್ಜಾಗುವ ಅನಿವಾರ್ಯತೆ ಇದೆ. ಕಲ್ಲಡ್ಕ ಸಮೀಪವೇ ಇರುವ ಮನೆಯೊಂದರ ಮೇಲೆ ಹೆದ್ದಾರಿ ಎತ್ತರಿಸಿದ ಪರಿಣಾಮ ಮಣ್ಣಿನ ರಾಶಿಯೇ ಬಿದ್ದಿದ್ದು ಮನೆಯವರು ಪರದಾಟ ನಡೆಸುವ ದೃಶ್ಯ ಮನಕಲಕುವಂತಿತ್ತು.
Be the first to comment on "ದಿನವಿಡೀ ಮಳೆ, ಮೆಲ್ಕಾರ್, ಕಲ್ಲಡ್ಕ ಹೆದ್ದಾರಿ ಅಯೋಮಯ"