ಬಂಟ್ವಾಳ: ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ರಕೆರೆ ಹಿ.ಪ್ರಾ.ಶಾಲೆಯಲ್ಲಿ ಬಂಟ್ವಾಳದ ಎಸ್.ವಿ.ಎಸ್.ಕಾಲೇಜಿನ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರವನ್ನು ಗ್ರಾಪಂ ಅಧ್ಯಕ್ಷೆ ಯಶೋಧಾ ಉದ್ಘಾಟಿಸಿದರು.
ಯುವ ಸಂಘಟನೆಗಳು ಸಮುದಾಯಕ್ಕೆ ಅನುಕೂಲವಾಗುವ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಈ ಸಂದರ್ಭ ಅವರು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ನ್ಯಾಯವಾದಿ ಶೈಲಜಾ ರಾಜೇಶ್ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಾಮೋದರ್ ನೆತ್ತರಕೆರೆ, ಶಿಬಿರಗಳ ಮೂಲಕ ಗಳಿಸಿದ ಜ್ಞಾನವನ್ನು ನಿತ್ಯ ಬದುಕಿನಲ್ಲಿ ಅನುಷ್ಠಾನಗೊಳಿಸಿಕೊಂಡು ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ಸ್ವಂತಕ್ಕೆ ಸ್ವಲ್ಪ ಮತ್ತು ಸಮಾಜಕ್ಕೆ ಸರ್ವಸ್ವ ಎಂಬ ಗುರಿಯನ್ನು ಹೊಂದಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಿನ್ಸಿಪಾಲ್ ಡಾ. ಸುಯೋಗ ವರ್ಧನ್ ಡಿ.ಎಂ ಮಾತನಾಡಿ, ಹಳ್ಳಿಗಳು ಸ್ವಾವಲಂಬಿ ಕೇಂದ್ರಶಕ್ತಿಗಳಾಗಬೇಕು ಎಂದರು. ಮುಖಂಡರಾದ ಜ್ಯೋತೀಂದ್ರ ಶೆಟ್ಟಿ, ಸುಬ್ರಹ್ಮಣ್ಯ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿಯಾದ ಡಾ. ವಿನಾಯಕ ಕೆ. ಎಸ್ ಸ್ವಾಗತಿಸಿದರು. ಸುಪ್ರೀತ್ ಕಡಕೊಳ್ ವಂದಿಸಿದರು. ಸಹಯೋಜನಾಧಿಕಾರಿ ಕಿಟ್ಟು ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.
Be the first to comment on "ನೆತ್ರಕೆರೆಯಲ್ಲಿ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರ"