ಬಂಟ್ವಾಳ

ನೆತ್ರಕೆರೆಯಲ್ಲಿ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನಿಂದ ಎನ್ನೆಸ್ಸೆಸ್ ವಿಶೇಷ ಶಿಬಿರ – ಸ್ವಸ್ತಿಕ ಹಳ್ಳಿಹಬ್ಬ

FOR ADVERTISEMENTS PLEASE CONTACT: HARISH MAMBADY, 9448548127

ಬಂಟ್ವಾಳ: ಮಂಗಳೂರಿನ ಊರ್ವಸ್ಟೋರ್ ನಲ್ಲಿರುವ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ಎನ್ನೆಸ್ಸೆಸ್ ನ ಪ್ರಥಮ ವಾರ್ಷಿಕ ವಿಶೇಷ ಶಿಬಿರ ಸ್ವಸ್ತಿಕ ಹಳ್ಳಿಹಬ್ಬ ಹೊಳ್ಳರಬೈಲು ನೆತ್ರಕೆರೆಯಲ್ಲಿ ಮೇ8ರಿಂದ 14ರವರೆಗೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಡಾ. ರಾಘವೇಂದ್ರ ಹೊಳ್ಳ ಮಾತನಾಡಿದರು.

ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನಲ್ಲಿ ಪದವಿ ವ್ಯಾಸಂಗ ಮಾಡುವ 64 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, 8ರಂದು ಸಂಜೆ 6 ಗಂಟೆಗೆ ಶಾಸಕ ರಾಜೇಶ್ ನಾಯ್ಕ್ ಶಿಬಿರ ಉದ್ಘಾಟಿಸುವರು ಎಂದು ಸ್ವಸ್ತಿಕ್ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಾಹೀರಾತು

ಪ್ರತಿದಿನವೂ ವಿವಿಧ ಸಂಘ, ಸಂಸ್ಥೆಗಳ ಸಹಕಾರದಿಂದ ವಿವಿಧ ಕಾರ್ಯಕ್ರಮ ಇರಲಿದ್ದು, ಬೀದಿ ನಾಟಕ ತರಬೇತಿ, ಮಣ್ಣು ಉಳಿಸಿ ಅಭಿಯಾನ, ಹೊನಲು ಬೆಳಕಿನ ಕಬಡ್ಡಿ, ಉಚಿತ ವೈದ್ಯಕೀಯ ಶಿಬಿರ, ಸೈಬರ್ ಸೆಕ್ಯುರಿಟಿ ಕುರಿತ ಮಾಹಿತಿ, ಪರಿಸರ ಮಾಲಿನ್ಯ ನಿರ್ವಹಣೆ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂದರ್ಶನ, ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, ಅರಣ್ಯ ಇಲಾಖೆ ಉದ್ಯಾನವನ ಸಂದರ್ಶನ, ಸ್ಥಳೀಯರಿಗೆ ನೃತ್ಯ ಸ್ಪರ್ಧೆ, ಪರಿಸರ ಮಾಲಿನ್ಯ, ಸಂರಕ್ಷಣೆ, ಹೊನಲು ಬೆಳಕಿನ ಕ್ರಿಕೆಟ್, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭಸ್ಮಾಸುರ ಮೋಹಿನಿ ಯಕ್ಷಗಾನ, ವಿಠಲ ನಾಯಕ್ ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ಇರಲಿದೆ. 14ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ವಸ್ತಿಕ ಸೇವಾ ಪ್ರಶಸ್ತಿಯನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಶಿಬಿರದ ನಿರ್ದೇಶಕರಾದ ಪ್ರಿನ್ಸಿಪಾಲ್ ಡಾ. ಮಾಲಿನಿ ಹೆಬ್ಬಾರ್, ರಾ.ಸೇ.ಯೋ.ಅಧಿಕಾರಿ ವಿದ್ಯಾಲಕ್ಷ್ಮೀ ಪಿ.ಶೆಟ್ಟಿ, ಎನ್ನೆಸ್ಸೆಸ್ ಘಟಕದ ನಾಯಕ ಶ್ರೀಹರಿ ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.