FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ಕಾಡಿನಿಂದ ನೀರು ಕುಡಿಯಲು ಬಂದ ಕಾಡುಕೋಣಯೊಂದು ನೀರಿನ ಟ್ಯಾಂಕ್ ಗೆ ಬಿದ್ದ ಘಟನೆ ಕನ್ಯಾನದಲ್ಲಿ ನಡೆದಿದೆ. ಸಮೀಪದಲ್ಲಿರುವ ಕಳೆಂಜೆಮಲೆ ರಕ್ಷಿತಾರಣ್ಯದಿಂದ ಕಾಡುಕೋಣ ನೀರು ಹುಡುಕಿಕೊಂಡು ನಾಡಿಗೆ ಬಂದಿದೆ. ಕನ್ಯಾನ ಭಾರತ ಸೇವಾಶ್ರಮದ ನೀರಿನ ಟ್ಯಾಂಕ್ ನಲ್ಲಿ ನೀರು ಕುಡಿಯಲು ಯತ್ನಿಸಿದೆ. ಈ ಸಂದರ್ಭ, ಕೋಣ ಟ್ಯಾಂಕ್ ಗೆ ಜಾರಿ ಬಿದ್ದಿದೆ. ಇದರಿಂದ ಮೇಲೆ ಏಳಲಾಗದೇ ಟ್ಯಾಂಕ್ ನೊಳಗಡೆ ಕೋಣ ಬಾಕಿಯಾಗಿದೆ. ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಬೆಳಿಗ್ಗೆ ಆಶ್ರಮ ನಿವಾಸಿಗಳು ನೋಡಿದಾಗ ಘಟನೆ ಬೆಳಕಿಗ್ಗೆ ಬಂದಿದೆ. ಸ್ಥಳಕ್ಕೆ ವಿಟ್ಲ ಶಾಖೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಕಾರ್ಯಾಚರಣೆ ನಡೆಸಿದರು.ಟ್ಯಾಂಕ್ ನಿಂದ ನೀರು ಖಾಲಿ ಮಾಡಿ, ಕೋಣವನ್ನು ಮೇಲಕ್ಕೆತ್ತಿದರು. ಐದು ಅಡಿ ಆಳದ ಟ್ಯಾಂಕಿಗೆ ಬಿದ್ದ ಕಾರಣ ಕೋಣಕ್ಕೇನೂ ಆಗಿಲ್ಲ
Be the first to comment on "ನೀರು ಕುಡಿಯಲೆಂದು ಬಂದ ಕಾಡುಕೋಣ ನೀರಿನ ಟ್ಯಾಂಕಿಗೇ ಬಿತ್ತು!!"