FOR ADVERTISEMENTS PLEASE CONTACT: HARISH MAMBADY, 9448548127
ಆಯುರ್ವೇದ ವೈದ್ಯರಾದ ಸೌಮ್ಯ ಸರಸ್ವತಿ ಪದ್ಯಾಣ ಮಂಡಿಸಿದ ಕ್ರಿಟಿಕಲ್ ಅನಾಲಿಸಿಸ್ ಆಫ್ ಲಕ್ಷಣ ಆಂಡ್ ಪರಿಹಾರ ಆಫ್ ಮನೋರೋಗ ವಿದ್ ರೆಫರೆನ್ಸ್ ಟು ಜ್ಯೌತಿಷ ಶಾಸ್ತ್ರ ಆಂಡ್ ಆಯುರ್ವೇದ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ವಿಶ್ವ ವಿದ್ಯಾನಿಲಯ ಕಾಲೇಜು ಹಂಪನಕಟ್ಟೆ ಮಂಗಳೂರು ಸಂಸ್ಕೃತ ಪ್ರಾಧ್ಯಾಪಕರಾದ ಡಾ. ಕುಮಾರ ಸುಬ್ರಹ್ಮಣ್ಯ ಭಟ್ ಅಮೈ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ರಚಿಸಲಾಗಿದೆ.
ಮಾಬಲಡ್ಕ ಮಹಾಲಿಂಗೇಶ್ವರ ಭಟ್-ಪರಮೇಶ್ವರಿ ದಂಪತಿಗಳ ಪುತ್ರಿ ಹಾಗೂ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣದವರಾದ ಪ್ರಸ್ತುತ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಸುಬ್ರಹ್ಮಣ್ಯ ಪದ್ಯಾಣ ಅವರ ಪತ್ನಿ ಯಾದ ಡಾ. ಸೌಮ್ಯ ಪದ್ಯಾಣ ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಯುರ್ವೇದದೊಂದಿಗೆ ಜ್ಯೋತಿಷ್ಯ ಶಾಸ್ತ್ರದ ಅನುಭವವಿರುವ ಇವರು ತಮ್ಮ ಚಿಕಿತ್ಸಾ ಕ್ರಮಗಳಲ್ಲಿ ಇವುಗಳನ್ನು ಅಳವಡಿಸಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ, ಆಡಳಿತ ಮಂಡಳಿ, ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ., ಉಪನ್ಯಾಸಕ ವೃಂದ, ವಿದ್ಯಾರ್ಥಿ ಸಮೂಹ, ಪದ್ಯಾಣ ಮತ್ತು ಮಾಬಲಡ್ಕ ಕುಟುಂಬ ಬಂಧು ಮಿತ್ರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Be the first to comment on "ವೈದ್ಯೆ ಸೌಮ್ಯಸರಸ್ವತಿ ಪದ್ಯಾಣ ಅವರಿಗೆ ಡಾಕ್ಟರೇಟ್"