ಪಂಜಿಕಲ್ಲು ಕಜೆಬೈಲಿನಲ್ಲಿ ದೇಜಪ್ಪ ಬಾಚಕೆರೆ ಅವರಿಗೆ ಸನ್ಮಾನ

ಬಂಟ್ವಾಳ: ಪಂಜಿಕಲ್ಲು ಗ್ರಾಮದ ಕಜೆಬೈಲುವಿನಲ್ಲಿ  ನಡೆದ ಶ್ರೀ ಪಿಲಿಚಾಮುಂಡಿ ದೈವದ ನೇಮೋತ್ಸವದ ಸಂದರ್ಭ ಪಿಲಿಚಾಮುಂಡಿ  ಫ್ರೆಂಡ್ಸ್  ಕಜೆಬೈಲು ಇದರ ವತಿಯಿಂದ ಖ್ಯಾತ ದೈವನರ್ತಕ, ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಿರ್ಮಾಣದ ರೂವಾರಿ ದೇಜಪ್ಪ ಬಾಚಕೆರೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ ತುಳುನಾಡಿನಲ್ಲಿ ದೈವರಾಧನೆ ಅತ್ಯಂತ ಪವಿತ್ರ ಕಾರ್ಯ. ಅತಂಹ ದೈವ ನರ್ತನ ಕಾರ್ಯವನ್ನು ದೇಜಪ್ಪ ಅವರು ಅತ್ಯಂತ ನಿಷ್ಠೆಯಿಂದ‌ ನಡೆಸಿಕೊಂಡು ಬರುತ್ತಿದ್ದಾರೆ. ಅವರು ಬಾಚಕೆರೆಯಲ್ಲಿ  ಜನ ಮೆಚ್ಚುವ ರೀತಿಯಲ್ಲಿ ದೇವಿ ಕ್ಷೇತ್ರವನ್ನು ನಿರ್ಮಿಸಿರುವುದು ಅಭಿನಂದನೀಯ ಎಂದರು.

ಪಂಜಿಕಲ್ಲು ಗುತ್ತು ಕೃಷ್ಣರಾಜ್ ಜೈನ್ , ಪೀರ್ದೊಟ್ಟು ಗುತ್ತು ಪ್ರಕಾಶ್ ಕುಮಾರ್ ಜೈನ್, ಕೇಲ್ದೋಡಿ ಗುತ್ತು ಪದ್ಮನಾಭ ಕೋಟಿ ಪೂಜಾರಿ, ಕಜೆಬೈಲು ಗುತ್ತು ಸಂಜೀವ ಶೆಟ್ಟಿ, ಗಂಗಾಧರ ವಿ.ಪೂಜಾರಿ ಅಮೈಗುತ್ತು,  ಪ್ರಮುಖರಾದ ಸುದರ್ಶನ ಜೈನ್ ಪಂಜಿಕಲ್ಲು, ಬೇಬಿ ಕುಂದರ್, ದೇವಪ್ಪ ಕುಲಾಲ್ ಪಂಜಿಕಲ್ಲು, ಸದಾನಂದ ಶೆಟ್ಟಿ, ಕಾರಂಬಡೆ ಶ್ರೀ ಮಹಮ್ಮಾಯಿ  ಕ್ಷೇತ್ರದ ಆಡಳಿತ ಮೋಕ್ತೇಸರ ಅರುಣ್ ಕುಮಾರ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕೋಟ್ಯಾನ್,  ಸುರೇಶ್ ಜೋರಾ, ಪಿಲಿಚಾಮುಂಡಿ ಫ್ರೆಂಡ್ಸ್ ನ ದೀಪಕ್, ಪುನೀತ್, ರಾಜೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ