ವಾಮದಪದವು

ಇರ್ವತ್ತೂರುಪದವು ಶ್ರೀ ಶಾರದಾ ಪೂಜಾ ಮಹೋತ್ಸವ: ಡಾ. ಮೋಹನ ಆಳ್ವ ಅವರಿಗೆ ಶ್ರೀ ಶಾರದಾ ತಿಲಕ ಪ್ರಶಸ್ತಿ ಪ್ರದಾನ

ಅಕ್ಟೋಬರ್ 18 ಮತ್ತು 19ರಂದು ಶ್ರೀ ಶಾರದಾ ಪೂಜಾ ಮಹೋತ್ಸವ ದಶಮಾನೋತ್ಸವ ಸಂಭ್ರಮ ಹಾಗೂ    ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವರಿಗೆ “ಶ್ರೀ ಶಾರದ ತಿಲಕ ಪ್ರಶಸ್ತಿ” ಪ್ರದಾನ ಕಾರ್ಯಕ್ರಮ ಇರ್ವತ್ತೂರುಪದವು ಶ್ರೀ ಶಾರದಾ ಪೂಜಾ ಮಹೋತ್ಸವ ಸಂದರ್ಭ ನಡೆಯಲಿದೆ.

ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಸ್ಟ್ ಹಾಗೂ ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ ಅ.18 ಮತ್ತು 19ರಂದು ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಶ್ರೀ ಶಾರದೋತ್ಸವದ ದಶಮಾನೋತ್ಸವ “ದಶಾರದ ಸಂಭ್ರಮ-2026” ವೈಭವಯುತವಾಗಿ ಸಂಪನ್ನಗೊಳ್ಳಲಿದೆ ಎಂದು ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಶ್ರೀ ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಎರ್ಮೆನಾಡು, ದಶಮಾನೋತ್ಸವ ಸಾಂಸ್ಕ್ರತಿಕ ಸಮಿತಿ ಅಧ್ಯಕ್ಷ ಆಲದಪದವು ಗೋಪಾಲ ಅಂಚನ್ ಪ್ರಕಟಣೆಯಲ್ಲಿ   ತಿಳಿಸಿದ್ದಾರೆ.

ಅ.18ರಂದು ಬೆಳಿಗ್ಗೆ ಶ್ರೀಶಾರದಾ ದೇವಿಯ ಪ್ರತಿಷ್ಠೆ, ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ,  ಭಕ್ತಿ ರಸಮಂಜರಿ, ಅನ್ನಸಂತರ್ಪಣೆ, ತೆಲಿಕೆದ ಗೊಂಚಿಲ್ ಹಾಸ್ಯ ಕಾರ್ಯಕ್ರಮ, ನೃತ್ಯ ವೈಭವ, ಭರತನಾಟ್ಯ, ಸಂಜೆ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅವರಿಗೆ “ಶ್ರೀ ಶಾರದ ತಿಲಕ ಪ್ರಶಸ್ತಿ” ಪ್ರದಾನ,”ದಶಾರದ” ಸ್ಮರಣ ಸಂಚಿಕೆ ಬಿಡುಗಡೆ, ರಾತ್ರಿ ತುಳು ನಾಟಕ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. 

ಜಾಹೀರಾತು

ಅ.19ರಂದು ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ತಾಲೂಕು ಮಟ್ಟದ ಆಯ್ದ ತಂಡಗಳಿಂದ ಮಕ್ಕಳ ಕುಣಿತ ಭಜನಾ ಸ್ಪರ್ಧೆ, ನೃತ್ಯ ವೈಭವ, ಮಹಾಪೂಜೆ, ಧಾರ್ಮಿಕ ಸಭೆ,ಯಕ್ಷಗಾನ ತಾಳಮದ್ದಳೆ, ಸಂಜೆ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆಯಲಿದೆ. ದಶಮಾನೋತ್ಸವದ ಅಂಗವಾಗಿ ಈಗಾಗಲೇ ಬಂಟ್ವಾಳ ತಾಲೂಕು ಮಟ್ಟದ ವಿದ್ಯಾರ್ಥಿಗಳು ಹಾಗೂ ಮುಕ್ತ ವಿಭಾಗದಲ್ಲಿ ವೈವಿದ್ಯಮಯ ಸ್ಪರ್ಧೆಗಳ “ದಶಾರದ ಸಾಂಸ್ಕ್ರತಿಕ ಸಂಭ್ರಮ”, ದಸರಾ ಕ್ರೀಡೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ “ದಶಾರದ ಪುರಸ್ಕಾರ”, ಗುರುವಂದನೆ, ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ. ಇದೀಗ ದಶಮಾನೋತ್ಸವಕ್ಕೆ  ವ್ಯಾಪಕ ಸಿದ್ಧತೆ ನಡೆದಿದ್ದು ಡಾ.ರಾಮಕೃಷ್ಣ ಎಸ್ ಅಧ್ಯಕ್ಷ, ಟಿ.ಹರೀಂದ್ರ ಪೈ ಕಾರ್ಯಾಧ್ಯಕ್ಷ, ಶೇಖರ್ ಪೂಜಾರಿ ಅಗಲ್ದೋಡಿ ಉಪಾಧ್ಯಕ್ಷ, ಮೋಹನ್ ಶೆಟ್ಟಿ ನರ್ವಲ್ದಡ್ಡ ಸಂಚಾಲಕ,  ದಯಾನಂದ ಎಸ್.ಎರ್ಮೆನಾಡು ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ಶಾರದ ಸೇವಾ ಟ್ರಸ್ಟ್,  ಸುದೀಂದ್ರ ಶೆಟ್ಟಿ ಎರ್ಮೆನಾಡು ಅಧ್ಯಕ್ಷ, ಚಂದ್ರಹಾಸ ನಾಯ್ಕ ಎರ್ಮೆನಾಡು ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ಶಾರದೋತ್ಸವ ಸೇವಾ ಸಮಿತಿ, ಸತೀಶ್ ಪೂಜಾರಿ ಬೆನಕ ಅಧ್ಯಕ್ಷ, ಶಂಕರ ಶೆಟ್ಟಿ ಬೆದ್ರಮಾರು ಸಂಚಾಲಕರಾಗಿರುವ ದಶಮಾನೋತ್ಸವ ಸಮಿತಿ, ಗೋಪಾಲ ಅಂಚನ್ ಅಧ್ಯಕ್ಷರಾಗಿರುವ  ದಶಮಾನೋತ್ದವ ಸಾಂಸ್ಕ್ರತಿಕ ಸಮಿತಿ, ಸುಪ್ರೀತ್ ಜೈನ್ ಎಡ್ತೂರುಗುತ್ತು, ಹರೀಶ ಪೂಜಾರಿ ಎರ್ಮೆನಾಡು, ಪ್ರಶಾಂತ ದೇವಾಡಿಗ ಹಲೆಪ್ಪಾಡಿ, ಶೇಖರ ಕರ್ಕೇರಾ ಕಯ್ಯಾಬೆ ನಿರ್ದೇಶಕರಾಗಿರುವ ನಿರ್ದೇಶಕ ಮಂಡಳಿ ದಶಮಾನೋತ್ಸವದ ಯಶಸ್ವಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದೆ.     

ಸಮಿತಿ ಬಗ್ಗೆ: ಶ್ರೀ ಶಾರದೋತ್ಸವ ಸೇವಾ ಸಮಿತಿಯು ಈ ದಶಪಯಣದ ಹಾದಿಯಲ್ಲಿ ಸಮಾಜದ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ನಿತ್ಯ ನಿರಂತರ ರಚನಾತ್ಮಕ, ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಾ ಜನಸಮುದಾಯದ ಪ್ರೀತಿ-ಗೌರವಾದರಗಳಿಗೆ ಪಾತ್ರವಾಗಿದೆ. ಜನಮಾನಸದಲ್ಲಿ ಧಾರ್ಮಿಕ ಜಾಗೃತಿ, ಸಂಸ್ಕಾರ ಮತ್ತು ಸಂಸ್ಕೃತಿಯ ಉದ್ದೀಪನ ಕಾರ್ಯದೊಂದಿಗೆ ಕಲೆ, ಸಾಹಿತ್ಯ, ಕ್ರೀಡೆ, ಆರೋಗ್ಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದ ಪ್ರಗತಿಯಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ. 

ಕೊರೊನಾ ಸಂದರ್ಭದಲ್ಲಿ ಅರ್ಹ ಕುಟುಂಬಗಳಿಗೆ  ರೇಷನ್ ಕಿಟ್ ವಿತರಣೆ, ಕೊರೊನ ವಾರಿಯರ್ಸ್ಗಳಿಗೆ ಸನ್ಮಾನ, ನಿರಂತರ ಉಚಿತ ಆರೋಗ್ಯ ಶಿಬಿರಗಳ ಆಯೋಜನೆ, ಜೇನು ಸಾಕಾಣೆ ತರಬೇತಿ ಕಾರ್ಯಾಗಾರ,  ಪವರ್ ಮ್ಯಾನ್‌ಗಳಿಗೆ ಗೌರವ, ಆಧಾರ್ ಕಾರ್ಡ್ ನೋಂದಣಿ ಶಿಬಿರ, ಅರ್ಹ ಕುಟುಂಗಳಿಗೆ ಮನೆ ನಿರ್ಮಾಣಕ್ಕೆ ಸಹಕಾರ, ಶ್ರೀನಿವಾಸನಗರ ಶಾಲೆಗೆ ಸ್ಟೀಲ್ ಕಪಾಟು ಕೊಡುಗೆ, ಕಾರ್ಮಿಕರ ನೋಂದಣಿ ಶಿಬಿರ, ಆನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಪರಿಸರದ ಜನತೆಗೆ ತುರ್ತು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ, ಕ್ಯಾನ್ಸರ್ ಜಾಗೃತಿ ಅಭಿಯಾನ ಮತ್ತಿತರ ಕಾರ್ಯಕ್ರಮಗಳನ್ನು ನಿರಂತರ ನಡೆಸಲಾಗುತ್ತಿದೆ.ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ‘ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ್’ ಯೋಜನೆಯಡಿಯಲ್ಲಿ ಶ್ರೀ ಶಾರದೋತ್ಸವ ಸೇವಾ ಸಮಿತಿಯನ್ನು ‘ನಿಕ್ಷಯ ಮಿತ್ರ’ ಎಂದು ಗುರುತಿಸಲಾಗಿದ್ದು ಈ ಯೋಜನೆಯಂತೆ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ೮ ಟಿ.ಬಿ. ರೋಗಿಗಳಿಗೆ ಸುಮಾರು ೬೦ ಸಾವಿರ ರೂಪಾಯಿ ವೆಚ್ಚದಲ್ಲಿ ೬ ತಿಂಗಳುಗಳ ಕಾಲ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತಿದೆ.

ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ.) ಇರ್ವತ್ತೂರುಪದವು ಸಂಸ್ಥೆಯು ಮೂಡುಪಡುಕೋಡಿ ಉನ್ನತೀಕರಿಸಿದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿದ್ದು  ಶಾಲಾ ಗೌರವ ಶಿಕ್ಷಕಿಗೆ ಮಾಸಿಕ ಗೌರವಧನ ಪಾವತಿಸುವಿಕೆ, ಶಾಲೆಗೆ ಚಿತ್ರಕಲಾ ಮತ್ತು ನೃತ್ಯ ಶಿಕ್ಷಕರ ನೇಮಕ,  ಯು.ಕೆ.ಜಿ. ಮತ್ತು ಎಲ್.ಕೆ.ಜಿ. ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡಿಕೆ, ಶಾಲೆಯಲ್ಲಿ ವನಮಹೋತ್ಸವ ಆಚರಣೆ, ಪರೀಕ್ಷೆ ತಯಾರಿ ಕಾರ‍್ಯಾಗಾರಗಳು, ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರಗಳು, ಶಾಲಾ ಪ್ರವೇಶೋತ್ಸವದ ಅದ್ದೂರಿ ಆಚರಣೆ, ರಾಷ್ಟ್ರೀಯ ಹಬ್ಬಗಳ ಆಚರಣೆ, ಶಾಲೆಗೆ ಇಪ್ಪತೈದು ಸಾವಿರ ರೂಪಾಯಿ ವೆಚ್ಚದಲ್ಲಿ ಕಂಪ್ಯೂಟರ್ ದುರಸ್ತಿ ಹಾಗೂ ಕಂಪ್ಯೂಟರ್ ಶಿಕ್ಷಕರ ನೇಮಕ, ಶಾಲೆಯ ಗೋಡೆಗಳಿಗೆ ಅಕ್ರಾಲಿಕ್ ಚಿತ್ರಗಳ ಶೃಂಗಾರ ಮೊದಲಾದ ಯೋಜನೆಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಮೂಡುಪಡುಕೋಡಿ ಶಾಲೆಗೆ ಒಳಾಂಗಣ ವೇದಿಕೆ, ಸಭಾಂಗಣಕ್ಕೆ ಟೈಲ್ಸ್ ಅಳವಡಿಕೆ, ಶಾಲಾ ಮುಂಭಾಗಕ್ಕೆ ಇಂಟರ್‌ಲಾಕ್ ಹಾಗೂ ಶೀಟ್ ಅಳವಡಿಕೆ, ತರಗತಿಗಳಿಗೆ ಸ್ಪೀಕರ್ ಅಳವಡಿಸಲು ಸುಮಾರು 15 ಲಕ್ಷ ರೂಪಾಯಿಯ ಯೋಜನೆಯು ನಮ್ಮ ಸಂಸ್ಥೆಯ ಮುಂದಿದೆ. ಇದರ ಯಶಸ್ವಿಗಾಗಿ ಸಹೃದಯಿ ದಾನಿಗಳ ನೆರವನ್ನು ನಿರೀಕ್ಷಿಸಲಾಗಿದೆ. 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.