ವಾಮದಪದವು

ಇರ್ವತ್ತೂರುಪದವು: “ದಶಾರದ ಪುರಸ್ಕಾರ ಪ್ರಶಸ್ತಿ” ಪ್ರದಾನ, ಗುರುವಂದನೆ, ಪ್ರತಿಭಾ ಪುರಸ್ಕಾರ

ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಟ್ಟ್ ಮತ್ತು    ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ   ಅಕ್ಟೋಬರ್ 18 ಮತ್ತು 19 ರಂದು ನಡೆಯುವ ಶ್ರೀ ಶಾರದಾ ಪೂಜಾ ದಶಮಾನೋತ್ಸವ “ದಶಾರದ ಸಂಭ್ರಮ-2026” ಅಂಗವಾಗಿ  ಮೂಡುಪಡುಕೋಡಿ ಶಾಲಾ ವಠಾರದಲ್ಲಿ ಇತ್ತೀಚೆಗೆ ನಡೆದ “ದಸರಾ ಕ್ರೀಡೋತ್ಸವ”ದಲ್ಲಿ ವಿವಿಧ ಕ್ಷೇತ್ರದ 10 ಮಂದಿ ಸಾಧಕರಿಗೆ ಮತ್ತು ಎರಡು ಸಂಘಟನೆಗಳಿಗೆ   “ದಶಾರದ ಪುರಸ್ಕಾರ ಪ್ರಶಸ್ತಿ” ಪ್ರದಾನ ಮಾಡಲಾಯಿತು. 

ವೇದಮೂರ್ತಿ, ಬ್ರಹ್ಮ ಶ್ರೀ  ಬಾಲಕೃಷ್ಣ ಪಾಂಗಣ್ಣಾಯ ನಡ್ವಂತಾಡಿ (ಧಾರ್ಮಿಕ ಮತ್ತು ವೈದಿಕ ಸೇವೆ), ಅಬ್ದುಲ್ ನಝೀರ್ ಸಾಹೇಬ್ ಇರ್ವತ್ತೂರು ( ಉದ್ಯಮ ಮತ್ತು ಸಾಮಾಜಿಕ ಸೇವೆ), ಡೇನಿಸ್ ಫೆರ್ನಾಂಡೀಸ್ ದೇರೊಟ್ಟು( ಕೃಷಿ ಮತ್ತು ಸಾಮಾಜಿಕ ಸೇವೆ), ವೆಂಕಪ್ಪ ಮೂಲ್ಯ ಬಂಗೇರಕೆರೆ( ನಿವೃತ್ತ ಯೋಧ ಮತ್ತು ಸಾಮಾಜಿಕ ಸೇವೆ), ದೇಜಪ್ಪ ಬಾಚಕೆರೆ ( ದೈವರಾದನೆ ಮತ್ತು ಧಾರ್ಮಿಕ ಸೇವೆ), ಆಲದಪದವು ಗೋಪಾಲ ಅಂಚನ್ ( ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸೇವೆ), ರತ್ನದೇವ್ ಪುಂಜಾಲಕಟ್ಟೆ ( ಕಲೆ  ಮತ್ತು ಮಾಧ್ಯಮ ಸೇವೆ), ಮುರಲಿಕೃಷ್ಣ ರಾವ್ ( ಚಿತ್ರಕಲೆ ಮತ್ತು ರಂಗಭೂಮಿ‌ ಸೇವೆ), ವಿಷ್ಣುಪ್ರಿಯಾ ಪೈ( ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧಕಿ),  ಸಹನಾ ಎಂ.ಶೆಟ್ಟಿ ನರ್ವಲ್ದಡ್ಡ ( ಭರತನಾಟ್ಯ ಮತ್ತು ಕರಾಟೆ ಶಿಕ್ಷಕಿ) ಮತ್ತು ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇರ್ವತ್ತೂರು ಘಟ ಸಮಿತಿ (ಗ್ರಾಮೀಣಾಭಿವೃದ್ಧಿ ಸೇವೆ), ಕೆ.ಕೆ.ಆರ್ ಸ್ಪೋರ್ಟ್ಸ್ ಕ್ಲಬ್ & ಹೆಲ್ತ್ ಲೈನ್ ಇರ್ವತ್ತೂರು ಕಲಾಬಾಗಿಲು( ಕ್ರೀಡೆ ಮತ್ತು ಆರೋಗ್ಯ ಸೇವೆ) ಅವರಿಗೆ “ದಶಾರದ ಪುರಸ್ಕಾರ ಪ್ರಶಸ್ತಿ” ಪ್ರದಾನ ಮಾಡಲಾಯಿತು.

ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ವೃಂದಕ್ಕೆ “ಗುರುವಂದನೆ” ಸಲ್ಲಿಸಲಾಯಿತು. ಸುತ್ತಮುತ್ತಲಿನ ಪಿಯುಸಿ ಮತ್ತು ಪ್ರೌಢಶಾಲೆಯಲ್ಲಿ ಅತ್ಯಧಿಕ ಅಂಕಪಡೆದ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ನಡೆಯಿತು.

ಜಾಹೀರಾತು

ಧಾರ್ಮಿಕ ಮುಖಂಡರಾದ ಹರ್ಷ ಸಂಪಿಗೆತ್ತಾಯ, ಉಪನ್ಯಾಸಕ ಅಬ್ದುಲ್ ರಜಾಕ್ ಅನಂತಾಡಿ, ಸಿದ್ಧಕಟ್ಟೆ ಸಹಕಾರಿ ಬ್ಯಾಂಕು ಅಧ್ಯಕ್ಷ ಪ್ರಭಾಕರ ಪ್ರಭು, ಉದ್ಯಮಿಗಳಾದ ಲಾದ್ರೂ ಮೆನೇಜಸ್, ಸುದರ್ಶನ್ ಬಜ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಶ್ರೀಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ರಾಮಕೃಷ್ಣ ಎಸ್, ಕಾರ್ಯಾಧ್ಯಕ್ಷ ಟಿ.ಹರೀಂದ್ರ ಪೈ, ಉಪಾಧ್ಯಕ್ಷ ಶೇಖರ್ ಪೂಜಾರಿ ಅಗಲ್ದೋಡಿ, ಸಂಚಾಲಕ ಮೋಹನ್ ಶೆಟ್ಟಿ ನರ್ವಲ್ದಡ್ಡ, ಪ್ರಧಾನ ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು, ನಿರ್ದೇಶಕರಾದ ಸುದೀಂದ್ರ ಶೆಟ್ಟಿ ಎರ್ಮೆನಾಡು, ಸುಪ್ರೀತ್ ಜೈನ್ ಎಡ್ತೂರುಗುತ್ತು, ಹರೀಶ ಪೂಜಾರಿ ಎರ್ಮೆನಾಡು, ಪ್ರಶಾಂತ ದೇವಾಡಿಗ ಹಲೆಪ್ಪಾಡಿ, ಶೇಖರ ಕರ್ಕೇರಾ ಕಯ್ಯಾಬೆ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಬೆನಕ, ದಶಮಾನೋತ್ಸವ ಸಮಿತಿ ಸಂಚಾಲಕ ಶಂಕರ ಶೆಟ್ಟಿ ಬೆದ್ರಮಾರು, ಶಾರದೋತ್ಸವ ಸಮಿತಿ ಕಾರ್ಯದರ್ಶಿ ಚಂದ್ರಹಾಸ ನಾಯ್ಕ ಎರ್ಮೆನಾಡು ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.