www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಅಪಘಾತದಲ್ಲಿ ಮೃತಪಟ್ಟಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘ ಶಂಭೂರು ಸಂಘದ ಸದಸ್ಯ ಪ್ರಕಾಶ್ ಕೆದ್ದೇಲ್ ಅವರಿಗೆ ಸಂಘದ ವತಿಯಿಂದ 1 ಲಕ್ಷ ರೂ ಪರಿಹಾರ ವಿಮೆಯನ್ನು ಅವರ ಪತ್ನಿ ದಾಕ್ಷಾಯಿಣಿ ಅವರಿಗೆ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ವಿತರಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಮಾಧವ ಕರ್ಬೆಟ್ಟು, ನಿರ್ದೇಶಕರಾದ ಶ್ರೀಶ ರಾಯಸ, ಮೋನಪ್ಪ ಪೂಜಾರಿ ಬೊಂಡಾಲ, ನಾರಾಯಣ ಪೂಜಾರಿ ಕೇದಿಗೆ, ನರಿಕೊಂಬು ಗ್ರಾಪಂ ಸದಸ್ಯರಾದ ರಂಜಿತ್ ಕೆದ್ದೇಲು, ಚೇತನ್ ಏಲಬೆ, ಸ್ಥಳೀಯರಾದ ಕೊರಗಪ್ಪ ಪೂಜಾರಿ ಕೆದ್ದೇಲ್, ಬಾಲಕೃಷ್ಣ ಬೋರುಗುಡ್ಡೆ, ಕೇಶವ ಕೆದ್ದೇಲ್, ಕಾರ್ಯದರ್ಶಿ ಯೋಗೀಶ್ ಅಮೀನ್, ಸಿಬ್ಬಂದಿ ಕೃತೀಕ್ಷಾ ಉಪಸ್ಥಿತರಿದ್ದರು.
Be the first to comment on "ಮೂರ್ತೆದಾರರ ಸೇವಾ ಸಹಕಾರಿ ಸಂಘ ಶಂಭೂರು ವತಿಯಿಂದ 1 ಲಕ್ಷ ರೂ ವಿಮೆ ವಿತರಣೆ"