www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಬೈಕ್ ನಲ್ಲಿ ಬಂದು, ಪರವಾನಗಿ ರಹಿತವಾಗಿ ಗೋಮಾಂಸ ಮಾಡಿ ಮಾರಲು ಯತ್ನಿಸಿದ ಆರೋಪದಲ್ಲಿ ಮಹಮ್ಮದ್ ಮುಸ್ತಾಫ (31) ಎಂಬಾತನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಿ.ಸಿ.ರೋಡಿನ ಗೂಡಿನಬಳಿ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದ್ದಾರೆ. ಆರೋಪಿಯ ಬೈಕ್ ಹಾಗೂ ಅದರಲ್ಲಿ ದ್ದ ಅಂದಾಜು 18 ಕೆ.ಜಿ.ಮಾಂಸವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ನೇಹಿತನ ಜೊತೆ ಸೇರಿ ಅಕ್ರಮವಾಗಿ ದನಗಳನ್ನು ಕದ್ದು ತಂದು ಪ್ರತಿ ಭಾನುವಾರ ಮನೆಯಲ್ಲಿ ಕಡಿದು ಮಾಂಸ ಮಾಡಿ ಬಳಿಕ ಮಾರಾಟ ಮಾಡುತ್ತಾರೆ ಎಂದು ದೂರಲಾಗಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment on "ಗೋಮಾಂಸ ಮಾರಾಟ ಪ್ರಕರಣ: ಆರೋಪಿ ಬಂಧನ"