www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ : ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಜನಸಾಮಾನ್ಯರ ದಾಖಲೆಗಳನ್ನು ಮನೆಗಳಿಗೆ ತಲುಪಿಸುವ ಯೋಜನೆ ಜಾರಿಗೊಳಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ, ಇದರಿಂದ ರಾಜ್ಯದ ಲಕ್ಷಾಂತರ ರೈತರಿಗೆ ಪ್ರಯೋಜನವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಮನೆಬಾಗಿಲಿಗೆ ಕಂದಾಯ ದಾಖಲೆಗಳನ್ನು ಒದಗಿಸುವ ಕಂದಾಯ ಸಚಿವ ಆರ್. ಅಶೋಕ್ ಅವರ ಮಹತ್ವಾಕಾಂಕ್ಷೆಯ ಯೋಜನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ಅಮ್ಮುಂಜೆಯ ನೋಣಯ್ಯ ಮೂಲ್ಯ ಅವರ ಮನೆಗೆ ಆರ್.ಟಿ.ಸಿ, ಜಾತಿ, ಆದಾಯ ಸರ್ಟಿಫಿಕೇಟ್ ಮತ್ತು ನಕ್ಷೆಯನ್ನು ವಿತರಿಸುವ ಮೂಲಕ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.ಇದು ರೈತರ ಕಣ್ಣೀರುಹಾಗೂ ಬೆವರನ್ನು ಒರೆಸುವ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್‌ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಮುಂದಿನ ಮೂರ್ನಾಲ್ಕು ತಿಂಗಳಿನ ಒಳಗಾಗಿ ಇದು ಪೂರ್ಣಗೊಳ್ಳಲಿದೆ ಎಂದವರು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ತಹಸೀಲ್ದಾರ್ ರಶ್ಮಿ ಎಸ್.ಆರ್, ಗ್ರಾಪಂ ಅಧ್ಯಕ್ಷ ವಾಮನ್ ಆಚಾರ್ಯ, ಉಪಾಧ್ಯಕ್ಷೆ ಪ್ರಮೀಳಾ, ಪಂಚಾಯಿತಿ ಸದಸ್ಯರಾದ ರವಿ ಸುವರ್ಣ, ಕಾರ್ತಿಕ್ ಬಲ್ಲಾಳ್, ಲೀಲಾವತಿ, ಲಕ್ಷ್ಮಿ, ರೊನಾಲ್ಡ್ ಡಿಸೋಜ, ಭಾಗೀರಥಿ, ರಾಧಾಕೃಷ್ಣ ತಂತ್ರಿ, ಶಿರಸ್ತೇದಾರ್ ನರೇಂದ್ರನಾಥ ಮಿತ್ತೂರು, ಕಂದಾಯ ನಿರೀಕ್ಷಕ ವಿಜಯ್, ಗ್ರಾಮಕರಣಿಕ ಪ್ರಶಾಂತ್, ಗ್ರಾಮಸಹಾಯಕ ರೂಪೇಶ್, ಪ್ರಮುಖರಾದ ವೆಂಕಟೇಶ ನಾವಡ, ನಂದರಾಮ ರೈ, ಗಣೇಶ ರೈ ಮಾಣಿ, ರಮನಾಥ ರಾಯಿ, ಯಶೋಧರ ಕರ್ಬೆಟ್ಟು, ಯಶವಂತ ಪೊಳಲಿ, ಸುಕೇಶ್ ಚೌಟ,ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು.
Be the first to comment on "ಕಂದಾಯ ದಾಖಲೆ ಮನೆ ಬಾಗಿಲಿಗೆ: ಅಮ್ಮುಂಜೆಯಲ್ಲಿ ಚಾಲನೆ ನೀಡಿದ ಸಂಸದ ನಳಿನ್"