ಮಿತ್ತಬೈಲ್ ಮಸೀದಿಗೆ ಚೂರಿ ಹೊಂದಿದ್ದ ವ್ಯಕ್ತಿ ಪ್ರವೇಶ ಘಟನೆ
www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಮಿತ್ತಬೈಲ್ ಮಸೀದಿಗೆ ನುಗ್ಗಿದ ವ್ಯಕ್ತಿಯ ಪೂರ್ವಾಪರಗಳ ಕುರಿತು ಸೂಕ್ತ ತನಿಖೆ ನಡೆಸುವಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾಗಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ತಿಳಿಸಿದ್ದು,, ಪ್ರಚೋದನೆಗೆ ಒಳಗಾಗದಂತೆ ಮನವಿ ಮಾಡಿದ್ದಾರೆ.
ಪೊಲೀಸರು ಆರೋಪಿಯ ಹಿನ್ನಲೆಯನ್ನು ಸಮಗ್ರ ತನಿಖೆ ನಡೆಸಿ ಸಮಾಜದಲ್ಲಿ ಉಂಟಾಗಿರುವ ಆತಂಕ ದೂರ ಮಾಡುವಂತೆ ಬಂಟ್ವಾಳ ಪುರಸಭಾಧ್ಯಕ್ಷ, ಮಿತ್ತಬೈಲು ಜಮಾಅತ್ ಸದಸ್ಯ ಹಾಗೂ ಮಸೀದಿ ಪರಿಸರದ ವಾರ್ಡ್ ಕೌನ್ಸಿಲರ್ ಕೂಡಾ ಆಗಿರುವ ಮುಹಮ್ಮದ್ ಶರೀಫ್ ಆಗ್ರಹಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯ ನೇತೃತ್ವ ವಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಎಸ್ಪಿಗೂ ಲಿಖಿತವಾಗಿ ಕೋರಲಾಗಿದೆ ಎಂದರು. ಸಾರ್ವಜನಿಕರು ಯಾವುದೇ ರಾಜಕೀಯ ಪ್ರೇರಿತ ಪ್ರಚೋದನೆಗಳಿಗೆ ಒಳಗಾಗದೆ ಪೊಲೀಸರ ತನಿಖೆಗೆ ಪೂರ್ಣ ಸಹಕಾರ ನೀಡುವುದರ ಜೊತೆಗೆ ಸಮಾಜದ ಶಾಂತಿ-ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಪುರಸಭಾಧ್ಯಕ್ಷ ಶರೀಫ್ ಅವರು ವಿನಂತಿಸಿದ್ದಾರೆ.
Be the first to comment on "ಪೊಲೀಸ್ ಅಧಿಕಾರಿಗಳೊಂದಿಗ ಮಾತುಕತೆ, ಪ್ರಚೋದನೆಗೆ ಒಳಗಾಗಬೇಡಿ: ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್"