www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಬ್ರಹ್ಮಕಲಶದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನವನ್ನು ವಿವಿಧ ಭಾಗದಿಂದ ಸಂಪರ್ಕಿಸುವ ನಿಟ್ಟಿನಲ್ಲಿ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು.
ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ಜೀಣೋದ್ದಾರ ಕಾರ್ಯಗಳನ್ನು ವೀಕ್ಷಿಸಿದರಲ್ಲದೆ ಧನುಷ ಗಾಣಿಗ ಕಲ್ಲಡ್ಕ ಹಾಡಿರುವ ಜಿ.ಎಸ್.ಗುರುಪುರ ಸಾಹಿತ್ಯ ರಚನೆ,ಶ್ರೀಪ್ರಸಾದ್ ನಿರ್ದೇಶನ ಹಾಗೂ ಚಿತ್ರೀಕರಣ, ಸ್ವರಣ್ಯ ಮತ್ತು ಬಳಗ ಅಭಿನಯದ ದೇವಂದಬೆಟ್ಟು ಬ್ರಹ್ಮಕಲಶದ ಅಮಂತ್ರಣ ಗೀತೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಜನರ ಸಹಭಾಗಿತ್ವ ಇದ್ದಾಗ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲು ಸಾಧ್ಯವಿದೆ.ಇದಕ್ಕೆ ದೇವಂದಬೆಟ್ಟು ಕ್ಷೇತ್ರದ ಬ್ರಹ್ಮಕಲಶದ ಹಿನ್ನಲೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿಯಾಗಿದೆ ಎಂದರು.
ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ಜಾರಂದಗುಡ್ಡೆ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ರಂಗೋಲಿ ಸದಾನಂದ ಶೆಟ್ಟಿ,ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಪ್ರ.ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ,ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ,ಸಾಹಿತಿ ಜಿ.ಎಸ್.ಗುರುಪುರ,ನಿರ್ಮಾಪಕ ಅನಿಲ್ ಪಂಡಿತ್ ವಳವೂರು ವೇದಿಕೆಯಲ್ಲಿದ್ದರು.
ಮಾಜಿ ತಾಪಂ.ಸದಸ್ಯ ಸೋಮಪ್ಪ ಕೋಟ್ಯಾನ್ ತುಂಬೆ,ಕಳ್ಳಿಗೆ ಗ್ರಾ. ಪಂ. ಸದಸ್ಯರಾದ ಮನೋಜ್ ವಳವೂರು, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಯೋಗೀಶ್ ದರಿಬಾಗಿಲು,ಪುರಸಭಾ ಸದಸ್ಯೆ ಚೈತನ್ಯ ಗಣೇಶ್ ದಾಸ್ ಪಲ್ಲಮಜಲು, ಕೇಶವ ದೈಪಲ. ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.ಕಳ್ಳಿಗೆ ಗ್ರಾ. ಪಂ. ಉಪಾಧ್ಯಕ್ಷ ದಾಮೋದರ ನೆತ್ತರಕೆರೆ ಪ್ರಸ್ತಾವಿಸಿ,ಸ್ವಾಗತಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ಸತೀಶ್ ಶೆಟ್ಟಿ ಮೊಡಂಕಾಪು, ವಂದಿಸಿದರು. ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.15 ಲ.ರೂ.ವೆಚ್ಚದಲ್ಲಿ ಬ್ರಹ್ಮರಕೂಟ್ಲು-ದರಿಬಾಗಿಲು ರಸ್ತೆ ಡಾಮರೀಕರಣ,10 ಲ.ರೂ.ವೆಚ್ಚದಲ್ಲಿ ಮಾಡಂಗೆ- ಕನಪಾಡಿ ರಸ್ತೆ ಕಾಂಕ್ರೇಟ್, 15 ಲ.ರೂ.ವೆಚ್ಚದಲ್ಲಿ ಕನಪಾಡಿ-ದೇವಂದಬೆಟ್ಟು ರಸ್ತೆ ಡಾಮರೀಕರಣ ,30 ಲ.ರೂ. ಮಾಡಂಗೆ-ಪಲ್ಲಮಜಲು ರಸ್ತೆ ಕಾಂಕ್ರೇಟೀಕರಣ,6 ಲ.ರೂ.ವೆಚ್ಚದಲ್ಲಿ ದೇವಂದಬೆಟ್ಟು ದೇವಸ್ಥಾನದ ಹಿಂಬದಿ ರಸ್ತೆ ಕಾಂಕ್ರೇಟೀಕರಣ,10 ಲ.ರೂ.ವೆಚ್ಚದಲ್ಲಿ ದೇವಸ್ಥಾನದ ಮುಂಭಾಗ ತಢಗೋಡೆ, ದೇವಂದಬೆಟ್ಟು ಮತ್ತು ಬೆದ್ರಾಡಿಯಲ್ಲಿ 2 ಕೊಳವೆಬಾವಿಯ ಉದ್ಘಾಟನೆಯನ್ನು ಶಾಸಕ ರಾಜೇಶ್ ನಾಯ್ಕ್ ನೆರವೇರಿಸಿದರು.
ಧಾರ್ಮಿಕ ದತ್ತಿಯಿಂದ 10 ಲ.ರೂ.: ದೇವಳದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ಪ್ರಯುಕ್ತ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದಲೂ 10 ಲ.ರೂ.ವನ್ನು ಮಂಜೂರಾತಿಗೊಳಿಸಿರುವ ಶಾಸಕರು ದೇವಳದ ಪಕ್ಕದಲ್ಲಿ ಗೋಶಾಲೆ,ಶೌಚಾಲಯ ನಿರ್ಮಾಣಕ್ಕಾಗಿ ಸ್ಥಳಾವಕಾಶದ ಕೊರತೆಯನ್ನು ಗಮನಿಸಿದ ಶಾಸಕರು ಖಾಸಗಿ ಜಮೀನಿನ ಮಾಲಕರ ಜತೆ ಮಾತುಕತೆ ನಡೆಸಿ ಆ ಜಮೀನನ್ನು ಶಾಸಕರೇ ಖರೀದಿಸಿ ದೇವಸ್ಥಾನಕ್ಕೆ ಕೊಡುಗೆಯಾಗಿ ಹಸ್ತಾಂತರಿಸಿದ್ದಲ್ಲದೆ ಹಾಗೆಯೇ ಗೋಶಾಲೆಗೆ ದನ,ಕರುವನ್ನು ಒದಗಿಸಿ ಈ ಭಾಗದ ಗ್ರಾಮಸ್ಥರ ಹಾಗೂ ಭಕ್ತರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಆರಂಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಸಲ್ಲಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬೇಡಿಕೆಗೆ ಶಾಸಕರು ತುರ್ತಾಗಿ ಸ್ಪಂದಿಸಿದ ಅನುದಾನವನ್ನು ಒದಗಿಸಿ ಕಾಮಗಾರಿಯನ್ನು ಪೂರ್ಣ ಗೊಳಿಸಿ ಇದೀಗ ಲೋಕಾರ್ಪಣೆ ಗೊಂಡಿದ್ದು,ಕಳ್ಳಿಗೆ ಗ್ರಾಮದ ರಸ್ತೆಗಳು ಹೊಸರೂಪವನ್ನು ಪಡೆದಿದೆ.
Be the first to comment on "ದೇವಂದಬೆಟ್ಟು 1 ಕೋ.ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣೆಗೊಳಿಸಿದ ಶಾಸಕ ನಾಯ್ಕ್ , ಬ್ರಹ್ಮಕಲಶದ ಅಮಂತ್ರಣ ಗೀತೆ ಬಿಡುಗಡೆ"