![](https://i0.wp.com/bantwalnews.com/wp-content/uploads/2021/11/WhatsApp-Image-2021-11-14-at-17.57.29.jpeg?resize=629%2C1024&ssl=1)
![](https://i0.wp.com/bantwalnews.com/wp-content/uploads/2020/09/SAMBHRAMA-2.jpeg?resize=500%2C704&ssl=1)
![](https://i0.wp.com/bantwalnews.com/wp-content/uploads/2022/01/271135309_7047887361918565_7040698794141801492_n.jpg?resize=526%2C526&ssl=1)
www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
![](https://i0.wp.com/bantwalnews.com/wp-content/uploads/2022/02/72f0ce63-634e-48c0-86d6-015e7284c5d9.jpg?resize=777%2C531&ssl=1)
![](https://i0.wp.com/bantwalnews.com/wp-content/uploads/2022/02/IMG-20220209-WA0021.jpg?resize=777%2C470&ssl=1)
![](https://i0.wp.com/bantwalnews.com/wp-content/uploads/2017/02/16bh-kalladka-umashiva-kshetra-1.jpg?resize=777%2C583&ssl=1)
ಬಂಟ್ವಾಳ: ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮಾರ್ಗದರ್ಶನದೊಂದಿಗೆ ಮಠದ ಆಡಳಿತಕ್ಕೊಳಪಟ್ಟ ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಫೆ.13ರಂದು ಶ್ರೀದೇವರ ಪ್ರತಿಷ್ಠಾ ಬ್ರಹ್ಮಕಲಶದ ನವಮ ವರ್ಧಂತ್ಯುತ್ಸವ ನೆರವೇರಲಿದೆ ಎಂದು ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ತಿಳಿಸಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ವಿವಿಧ ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ನಾಗ ರಕ್ತೇಶ್ವರಿ ತಂಬಿಲ, ಶತರುದ್ರ, ಸಾಮೂಹಿಕ ಕುಂಕುಮಾರ್ಚನೆ, ಶತರುದ್ರ ಕಲಶಾಭಿಷೇಕ, ನವಕ ಕಲಶಾಭಿಷೇಕ ಇರಲಿದೆ. ಮಧ್ಯಾಹ್ನ 11.30ಕ್ಕೆ ಧಾರ್ಮಿಕ ಸಭೆ ಬಳಿಕ 1 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಇರಲಿದೆ. ಧಾರ್ಮಿಕ ಸಭೆ ಅಧ್ಯಕ್ಷತೆಯನ್ನು ಕ್ಯಾಂಪ್ಕೊ ಉಪಾಧ್ಯಕ್ಷ ಶಂ.ನಾ.ಖಂಡಿಗೆ ವಹಿಸಲಿದ್ದು, ಶ್ರೀರಾಮ ಪದವಿ ಕಾಲೇಜು ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಚಿ ಶ್ರೀ ಗೋಪಾಲಕೃಷ್ಣ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಮತ್ತು ಉದ್ಯಮಿ ಕೆ.ಸದಾಶಿವ ಆಚಾರ್ಯ ಭಾಗವಹಿಸುವರು ಎಂದು ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ವಿ.ಗೋಪಾಲಕೃಷ್ಣ, ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಶ್ರೀರಾಮಚಂದ್ರಾಪುರ ಮಠದ ಸಿಇಒ ಕೆ.ಜಿ.ಭಟ್, ಹವ್ಯಕ ಮಂಡಲ ಮಂಗಳೂರು ಅಧ್ಯಕ್ಷ ಗಣೇಶ್ ಮೋಹನ ಕಾಶಿಮಠ, ಸೇವಾ ಸಮಿತಿ ಕಾರ್ಯದರ್ಶಿ ಶಾಮ ಭಟ್, ಕೋಶಾಧಿಕಾರಿ ಎಸ್.ಎನ್.ಶ್ರೀಕಾಂತ ಮತ್ತು ಸರ್ವಸದಸ್ಯರ ಪ್ರಕಟಣೆ ತಿಳಿಸಿದೆ.
![](https://i0.wp.com/bantwalnews.com/wp-content/uploads/2019/05/ಉಮಾಶಿವ-ಕ್ಷೇತ್ರ.jpg?resize=640%2C480&ssl=1)
Be the first to comment on "ಫೆ.13ರಂದು ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ ಪ್ರತಿಷ್ಠಾ ವರ್ಧಂತ್ಯುತ್ಸವ"