www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ನಿತ್ಯ ಸಂಧ್ಯಾಭಜನೆ, ಅಹರ್ನಿಶಿ ಉತ್ಸಾಹದಲ್ಲಿ ದುಡಿಯುತ್ತಿರುವ ಕರಸೇವಕರು, ಊರ ಹಸ್ತುಸಮಸ್ತರ ಜೊತೆಗೆ ಪರವೂರಿನಿಂದಲೂ ಆಗಮಿಸಿ ಅದ್ಧೂರಿತನವನ್ನು ಕಣ್ತುಂಬಿಕೊಳ್ಳುತ್ತಿರುವ ಭಕ್ತರು.
ಬಂಟ್ವಾಳ ತಾಲೂಕಿನ ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಅದ್ಧೂರಿಯ ಕಳೆಯೇರಿದೆ.
ಜಿ.ಎಸ್. ಗುರುಪುರ ಸಾಹಿತ್ಯದ ಬ್ರಹ್ಮಕಲಶ ಆಮಂತ್ರಣ ಗೀತೆಯ ಟೀಸರ್, ಹಸಿರುವಾಣಿ ಹೊರೆಕಾಣಿಕೆ ಕರಪತ್ರ, ಬ್ರಹ್ಮಕಲಶದ ಪ್ರಚಾರ ಸ್ಟಿಕ್ಕರ್ ಬಿಡುಗಡೆಗೊಳಿಸಿ ವಾಹನಗಳಿಗೆ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ, ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ನವೀನ್ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಸಂಚಾಲಕ ತೇವು ತಾರನಾಥ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ಕೋಶಾಕಾರಿ ಕವಿರಾಜ್ ಚಂದ್ರಿಗೆ, ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ ಮೊಡಂಕಾಪುಗುತ್ತು, ದಿವಾಕರ ಶೆಟ್ಟಿ ಕುಪ್ಪಿಲಗುತ್ತು, ಕೇಶವ ದೈಪಲ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಅಮಿತಾ ವಿಶ್ವನಾಥ ದಾಸರಕೋಡಿ, ಉಮಾ ಲಿಂಗಪ್ಪ ಕುಲಾಲ್ ತುಂಬೆ, ಗೌರವ ಸಲಹೆಗಾರರಾದ ಶಿವರಾಮ ಶಿಬರಾಯ, ರಾಘವೇಂದ್ರ ಕಾರಂತ ಕನಪಾಡಿ, ಅನಿಲ್ ಕುಮಾರ್ ಪಂಡಿತ್ ವಳವೂರು, ಜಯಪ್ರಕಾಶ್ ತುಂಬೆ, ಉಪಾಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ರಾಮಕೃಷ್ಣ ಆಳ್ವ ಪೊನ್ನೋಡಿ, ಮುಂಡಾಜೆಗುತ್ತು ಜ್ಯೋತೀಂದ್ರ ಶೆಟ್ಟಿ, ಪೂವಪ್ಪ ಸಪಲ್ಯ ದರಿಬಾಗಿಲು, ದಿವಾಕರ ಶೆಟ್ಟಿ ಪರಾರಿಗುತ್ತು, ವೇದನಾಥ ಶೆಟ್ಟಿ ಮೊಡಂಕಾಪುಗುತ್ತು, ಮನೋಜ್ ವಳವೂರು ಮತ್ತಿತರರೊಂದಿಗೆ ಪ್ರತಿಯೊಬ್ಬ ಕರಸೇವಕರೂ ಉತ್ಸಾಹದಲ್ಲಿ ದುಡಿಯುತ್ತಿದ್ದಾರೆ. ದೇವಸ್ಥಾನ ಜೀಣೋದ್ಧಾರ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಭಾನುವಾರ 30ಕ್ಕೂ ಅಧಿಕ ಕರಸೇವಕರು ಸೇವಾರೂಪದಲ್ಲಿ ಪೈಂಟಿಂಗ್ ನಡೆಸಿದರು. ಮಹಿಳೆಯರು ಸ್ವಚ್ಛತಾ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ.
Be the first to comment on "ಕರಸೇವಕರ ಉತ್ಸಾಹ, ದೇವಂದಬೆಟ್ಟು ಬ್ರಹ್ಮಕಲಶೋತ್ಸವಕ್ಕೆ ಅದ್ಧೂರಿಯ ಕಳೆ"