www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಮಂಗಳೂರು ಜೇಸಿ ಇಂಪ್ಯಾಕ್ಟ್ ಪ್ರಾಯೋಜಿತ ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಎಂಬ ಹೆಸರಿನ ಜೇಸಿಯ ಹೊಸ ಘಟಕವೊಂದು ಉದಯವಾಗಿದ್ದು, ಭಾನುವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಇದರ ಪದಗ್ರಹಣ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಬಿ.ಸಿ.ರೋಡಿನ ಉದ್ಯಮಿ ಸುಬ್ರಹ್ಮಣ್ಯ ಕೆ. ಅವರು ಅಧ್ಯಕ್ಷರಾಗಿ ಸುಮಾರು 20ಕ್ಕೂ ಅಧಿಕ ಮಂದಿಯ ಹೊಸ ಸದಸ್ಯರ ತಂಡದೊಂದಿಗೆ ಅಧಿಕಾರ ಸ್ವೀಕರಿಸಲಿದ್ದು, ಕಾರ್ಯಕ್ರಮವನ್ನು ನ್ಯಾಯವಾದಿ ಕಾರ್ತಿಕ್ ಕೆ. ಉದ್ಘಾಟಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸದಸ್ಯ ಸತೀಶ್ ಸಂಪಾಜೆ ತಿಳಿಸಿದರು.
ಈ ಸಂದರ್ಭ ಮಾತನಾಡಿದ ಸುಬ್ರಹ್ಮಣ್ಯ ಕೆ, ವ್ಯಕ್ತಿತ್ವ ವಿಕಸನ ಹಾಗೂ ಹೊಸ ಯೋಚನೆಗಳೊಂದಿಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹೊಸ ಘಟಕ ರಚನೆಗೊಂಡಿದ್ದು, ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಹೇಳಿದರು. ನಿಯೋಜಿತ ಕೋಶಾಧಿಕಾರಿ ಸುಭಾಷ್ ರೈ ಮಾಹಿತಿ ನೀಡಿ, ಕಾರ್ಯದರ್ಶಿಯಾಗಿ ಸುಧೀರ್ ಕುಮಾರ್ ಶೆಟ್ಟಿ ಪದಗ್ರಹಣ ಸ್ವೀಕರಿಸಲಿದ್ದು, ಈ ಸಂದರ್ಭ ಮುಖ್ಯ ಅತಿಥಿಯಾಗಿ ಡಾ. ಪ್ರದೀಪ್ ಕುಮಾರ್ ಶೆಟ್ಟಿ ಮತ್ತು ರಾಕೇಶ್ ಕುಂಜೂರು, ಹಾಗೂ ವಲಯ ಉಪಾಧ್ಯಕ್ಷ ದೀಪಕ್ ಗಂಗೂಲಿ ಪದಗ್ರಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.
Be the first to comment on "ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಭಾನುವಾರ ಉದ್ಘಾಟನೆ"