www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ಬಂಟ್ವಾಳ ಕ್ಷೇತ್ರದ 35ಕ್ಕೂ ಮಿಕ್ಕಿ ದೇವಸ್ಥಾನಗಳ ಸಂಪರ್ಕ ರಸ್ತೆ ಆದ್ಯತೆ ಮೇಲೆ ಅಭಿವೃದ್ಧಿಗೊಳಿಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.ಸುಮಾರು 1.65 ಕೋಟಿ ರೂ ವೆಚ್ಚದ ರಸ್ತೆ ಕಾಂಕ್ರೀಟ್ ಅಭಿವೃದ್ಧಿಯ ಕಾಮಗಾರಿ ಉದ್ಘಾಟಿಸಿದ ಬಳಿಕ ಬಂಟ್ವಾಳ ತಾಲೂಕಿನ ಮುಗುಳ್ಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಗುಳಿಯ ದೇವಸ್ಥಾನ ಹಾಗೂ ಸ್ಥಳೀಯ ಬಿಜೆಪಿ ಸಮಿತಿಯ ವತಿಯಿಂದ ಶಾಸಕರು, ಬಂಟ್ವಾಳ ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಗುತ್ತಿಗೆದಾರ ಧೀರಜ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.ಜಿ.ಪಂ.ಮಾಜಿ ಸದಸ್ಯ ರವೀಂದ್ರ ಕಂಬಳಿ, ಸಜೀಪಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಮುಂಬಯಿನ ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು, ಮುಂಬಯಿ ಪನ್ವೇಲ್ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ದಳಂದಿಲ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಸಂಕೇಶ, ಗ್ರಾ.ಪಂ.ಸದಸ್ಯರಾದ ನವೀನ್ ಅಂಚನ್ ಶಾಂತಿನಗರ, ಸುಮತಿ ಎಸ್.ಖಂಡಿಗ, ಸುಂದರ, ರಾಜೇಶ್ ಮರ್ತಾಜೆ, ಅನಿತಾ, ಗಣೇಶ್ ಕುಲಾಲ್, ಸಂದೀಪ್ ಎಚ್, ಚಂದ್ರಕಲಾ, ದಯಾಲಕ್ಷ್ಮೀ, ಸರೋಜಿನಿ, ಮುಗುಳಿಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆಗುತ್ತು, ಗುತ್ತಿಗೆದಾರ ಧೀರಜ್ ನಾಯ್ಕ್, ಮಂಜಲ್ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಕೃಷ್ಣಶಾಮ್, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಪ್ರಮುಖರಾದ ಚರಣ್ ಜುಮಾದಿಗುಡ್ಡೆ, ರಮಾನಾಥ ರಾಯಿ, ಸುದರ್ಶನ್ ಬಜ, ರೂಪೇಶ್ ಆಚಾರ್ಯ, ಯಶವಂತ ನಾಯ್ಕ್ ನಗ್ರಿ, ವಿನೋದರಾಜ್ ಮುಗುಳಿಯ, ಸೋಮಶೇಖರ್ ಆಲಾಡಿ, ಹರಿಪ್ರಸಾದ್, ದೇವಪ್ಪ, ಇದಿನಬ್ಬ ನಂದಾವರ, ಇಸ್ಮಾಯಿಲ್, ಸುಷ್ಮಾ ಚರಣ್, ಸೀತಾರಾಮ ಅಗೋಳಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ಸಜೀಪಮುನ್ನೂರು ಗ್ರಾ.ಪಂ.ಸದಸ್ಯ ಪ್ರವೀಣ್ ಗಟ್ಟಿ ಸ್ವಾಗತಿಸಿದರು. ದಿನಕರ್ ಕಾರ್ಯಕ್ರಮ ನಿರ್ವಹಿಸಿದರು. ಶಾಸಕರು ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಂಪರ್ಕ ರಸ್ತೆ- 50 ಲಕ್ಷ ರೂ., ಮಂಜಲ್ಪಾದೆ ದೇವಸ್ಥಾನ ಸಂಪರ್ಕ ರಸ್ತೆ- 30 ಲಕ್ಷ ರೂ., ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ದೈವಸ್ಥಾನ ಸಂಪರ್ಕ ರಸ್ತೆ- 55 ಲಕ್ಷ ರೂ., ಪರಾರಿಗುತ್ತು ಭಂಡಾರದಮನೆ ಸಂಪರ್ಕ ರಸ್ತೆ- 10 ಲಕ್ಷ ರೂ., ದಳಂದಿಲ ಸಂಪರ್ಕ ರಸ್ತೆ- 20 ಲಕ್ಷ ರೂ. ಕಾಮಗಾರಿ ಉದ್ಘಾಟಿಸಿದರು.
Be the first to comment on "ಕ್ಷೇತ್ರದಲ್ಲಿ 35ರಷ್ಟು ದೇವಸ್ಥಾನಗಳ ಸಂಪರ್ಕ ರಸ್ತೆ ಆದ್ಯತೆ ಮೇಲೆ ಅಭಿವೃದ್ಧಿ: ಶಾಸಕ ರಾಜೇಶ್ ನಾಯ್ಕ್"